ಯಡಿಯೂರಪ್ಪಗೆ ರಾಷ್ಟ್ರಮಟ್ಟದ ಸಂಸದೀಯ ಮಂಡಳಿಯ ಜವಾಬ್ದಾರಿ : ಇಬ್ಬರು ಕನ್ನಡಿಗರಿಗೆ ಸ್ಥಾನ.!​​

ಬೆಂಗಳೂರು : ಬಿಜೆಪಿಯ ನೂತನ ಸಂಸದೀಯ ಮಂಡಳಿಯನ್ನು ರಚಿಸಿದ್ದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ ಸಂಸದೀಯ ಮಂಡಳಿಯನ್ನ ಪುನರ್​ ರಚಿಸಿದ್ದು, ಇಬ್ಬರು ಕನ್ನಡಿಗರಿಗೆ ಪ್ರಮುಖ ಸ್ಥಾನ ನೀಡಿದ್ದಾರೆ. ಅದರಲ್ಲೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿಎಸ್​ ಯಡಿಯೂರಪ್ಪ ಅವರು 11 ಜನರ ತಂಡದಲ್ಲಿ ಸ್ಥಾನ ಪಡೆದಿರೋದು ಗಮನಾರ್ಹವಾಗಿದೆ. ಹಾಗೂ ಬಿಜೆಪಿಯ ನೀತಿ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಸಂಸದೀಯ ಮಂಡಳಿ ಹೊಂದಿರಲಿದೆ.

ಇಬ್ಬರು ಕನ್ನಡಿಗರಿಗೆ ಸ್ಥಾನ :

ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಎಲ್ ಸಂತೋಷ್ ಕೂಡ ಸಂಸದೀಯ ಮಂಡಳಿಯಲ್ಲಿದ್ದು, ಈ ಬಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನ ಕೈಬಿಡಲಾಗಿದೆ.

ಸಂಸದೀಯ ಮಂಡಳಿಯ ಜವಾಬ್ದಾರಿ :

  1.  ಜಿ.ಪಿ ನಡ್ಡಾ (ಅಧ್ಯಕ್ಷ)
  2.  ನರೇಂದ್ರ ಮೋದಿ
  3.  ರಾಜನಾಥ್ ಸಿಂಗ್
  4.  ಅಮಿತ್ ಶಾ
  5.  ಬಿಎಸ್​ ಯಡಿಯೂರಪ್ಪ
  6.  ಸೊರ್ಬಾನಂದ್ ಸೋನವಾಲ
  7.  ಕೆ.ಲಕ್ಷ್ಮಣ್
  8.  ಇಕ್ಬಾಲ್ ಸಿಂಗ್ ಲಾಲ್ ಪುರ
  9.  ಸುಧಾ ಯಾದವ್
  10.  ಸತ್ಯ ನಾರಾಯಣ್ ಜಟಿಯಾ
  11.  ಭುಪೇಂದ್ರ ಯಾದವ್
  12.  ದೇವೇಂದ್ರ ಫಡ್ನವಿಸ್
  13.  ಬಿಎಲ್​ ಸಂತೋಷ್

ಆದರೆ ಹಿರಿಯ ನಾಯಕರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿಯ ಪ್ರಮುಖ ಸಂಸದೀಯ ಸಮಿತಿಯಿಂದ ಕೈಬಿಡಲಾಗಿದೆ.

Recent Articles

spot_img

Related Stories

Share via
Copy link
Powered by Social Snap