ದಾವಣಗೆರೆ:
ರಾಜ್ಯದ ಜೆ.ಡಿ.ಎಸ್.-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡುವುದರಲ್ಲಿ ಯಶಸ್ವಿಯಾಗುತ್ತಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜನರಿಂದ ಜನರಿಗೋಸ್ಕರ ಜನರಿಗಾಗಿಯೇ ಸೃಷ್ಠಿಯಾದಂತಹ ಈ ಸಾಂದರ್ಭಿಕ ಶಿಶು ನೈಜ ಶಿಶುವಾಗಿ ಮಾರ್ಪಾಡಾಗುತ್ತಿದೆ ಜನರಿಂದ ಮಾಹಿತಿಯನ್ನು ಸಂಗ್ರಹಿಸಿ ಜನರಿಗೋಸ್ಕರ ಯೋಜನೆ ರೂಪಿಸಿ ಜನರಿಗಾಗಿಯೇ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿ ಆಡಳಿತ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ಟಿ. ದಾಸಕರಿಯಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ನುಡಿದಂತೆ ರೈತರ ಸಾಲ ಮನ್ನಾ ಯೋಜನೆಯನ್ನು ರೈತರು ಮಾಡಿದ್ದ ಸಹಕಾರಿ ಬ್ಯಾಂಕುಗಳಲ್ಲಿದ್ದ ಸಾಲ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ ಮತ್ತು ಅಧಿಕಾರಕ್ಕೇರುವ ಮುನ್ನ ಅನಾರೋಗ್ಯದ ನಡುವೆಯೂ ಇಸ್ರೇಲಿನಲ್ಲಿ ರೈತರು ಅಳವಡಿಸಿರುವ ತಂತ್ರಜ್ಞಾನವನ್ನು ಕರ್ನಾಟಕದಲ್ಲಿ ಅಳವಡಿಸಲು ಅಧ್ಯಯನ ನಡೆಸಿ ಈಗ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದ್ದಾರೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿ ಬೆಳೆಗಳನ್ನು ಬೆಳಸಬೇಕು ಎಂದು ನಿಜವಾದ ಕನಸು ಕಂಡಿರುವ ನಮ್ಮ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಈ ಯೋಜನೆಯನ್ನು ರೂಪಿಸುತ್ತಿದ್ದಾರೆ.
ರಾಜ್ಯದಲ್ಲಿ ಕೆಲವು ಕಡೆ ಉತ್ತಮ ಮಳೆಯಾಗಿ ರಾಜ್ಯದಲ್ಲಿರುವ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಇನ್ನೂ ಕೆಲವು ಕಡೆ ಭಾರೀ ಮಳೆಯಿಂದ ಅತಿವೃಷ್ಠಿಯಾಗಿದೆ. ಮತ್ತು ಕೆಲವು ಜಿಲ್ಲೆಗಳಲ್ಲಿ ಮಳೆಯಾಗದೇ ಅನಾವೃಷ್ಠಿ ಸಂಭವಿಸಿದೆ. ಅತಿವೃಷ್ಠಿ ಮತ್ತು ಅನಾವೃಷ್ಠಿಗೆ ಪರಿಹಾರ ರೂಪಿಸುವ ಯೋಜನೆಯನ್ನು ಜಾರಿಗೆ ತರಲು ಕುಮಾರಸ್ವಾಮಿಯವರು ದೃಢ ನಿರ್ಧಾರಕ್ಕೆ ಕರ್ನಾಟಕದ ರಾಜ್ಯದ ಜನತೆ ಪರಿಹಾರ ರೂಪದಲ್ಲಿ ಸಹಕರಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯವರು ಸಹ ಕೊಡಗು ಜಿಲ್ಲೆಗೆ ಭೇಟಿಕೊಟ್ಟು ಜನರ ಕಷ್ಟಗಳನ್ನು ತಿಳಿದುಕೊಂಡು ನಿಮ್ಮ ರಕ್ಷಣೆಗೆ ಹಾಗೂ ನಿಮ್ಮ ಬೆನ್ನಿಗೆ ಸರ್ಕಾರ ಇದೆ ಎಂಬ ಆತ್ಮವಿಶ್ವಾಸವನ್ನು ಯೋಜನೆಗಳ ಮುಖಾಂತರ ನೀಡುತ್ತಿದ್ದಾರೆ. 100 ದಿನ ಪೂರೈಸುತ್ತಿರುವ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ, ಬಡವರ, ದೀನ ಅಲ್ಪಸಂಖ್ಯಾತರ ಹಾಗೂ ರೈತರ ಪರವಾಗಿ ಶತದಿನೋತ್ಸವದೊಂದಿಗೆ ಮುನ್ನುಗ್ಗುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.