ಶಾಂತಿಯುತ ಮತದಾನಕ್ಕೆ ಸಹಕಾರ ನೀಡುವಂತೆ ತಹಶೀಲ್ದಾರ್ ಮನವಿ

ಚಳ್ಳಕೆರೆ

              ನಗರಸಭೆಯ 30 ವಾರ್ಡ್‍ಗಳ ವ್ಯಾಪ್ತಿಯ 43 ಮತಗಟ್ಟೆ ಕ್ಷೇತ್ರಗಳಲ್ಲಿ ಆಗಸ್ಟ್ 31ರ ಬೆಳಗ್ಗೆ 7 ರಿಂದ ಸಂಜೆ 5ರ ತನಕ ಮತದಾನ ನಡೆಯಲಿದ್ದು, ಎಲ್ಲಾ ಮತದಾರರು ನಿರ್ಭಿತಿಯಿಂದ ಮತಚಲಾಯಿಸುವಂತೆಯೂ ಯಾವುದೇ ಆಮಿಷಗಳಿಗೆ ಒಳಗಾಗದೆ ಪವಿತ್ರವಾದ ಮತದಾನದಲ್ಲಿ ಪಾಲ್ಗೊಳ್ಳುವಂತೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮನವಿ ಮಾಡಿದ್ಧಾರೆ.

              ಅವರು, ಗುರುವಾರ ಪತ್ರಿಕೆಯೊಂದಿಗೆ ಮಾತನಾಡಿ, ನಗರದ ಒಟ್ಟು 43 ಮತಗಟ್ಟೆ ಕ್ಷೇತ್ರದಲ್ಲಿ ನಗರದ 42987 ಮತದಾರರು ಮತ ಚಲಾಯಿಸಲು ಅವಕಾಶವಿದ್ದು, ಎಲ್ಲಾ ಮತಗಟ್ಟೆ ಕ್ಷೇತ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋ¨ಸ್ತ್ ವ್ಯವಸ್ಥೆ ಮಾಡಲಾಗಿದೆ. ಮತದಾನ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕಿದೆ. ಈಗಾಗಲೇ 43 ಮತಗಟ್ಟೆ ಕೇಂದ್ರಗಳಿಗೆ ನಿಯೋಜನೆಯೊಂಡ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ಮತಗಟ್ಟೆ ಕೇಂದ್ರಗಳಲ್ಲಿ ವಾಸ್ತವ್ಯ ಮಾಡಿದ್ಧಾರೆ. ಮತದಾನಕ್ಕೆ ಬೇಕಿರುವ ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಮತದಾನ ಸಂದರ್ಭದಲ್ಲಿ ಯಾರೂ ಸಹ ಕಾನೂನು ಉಲ್ಲಂಘಿಸುವ ಕಾರ್ಯಕ್ಕೆ ಕೈ ಹಾಕಬಾರದು. ಮತ ನೀಡಲು ಯಾವುದೇ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಆಮೀಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕಿದೆ. ಮತದಾನ ಚುನಾವಣಾ ಆಯೋಗ ನೀಡಿರುವ ಸಂವಿಧಾನ ಬದ್ದ ಹಕ್ಕಾಗಿದ್ದು, ಇದನ್ನು ಚಲಾಯಿಸಲು ಹಿಂದೇಟು ಹಾಕಬಾರದು ಎಂದರು.

             ಡಿವೈಎಸ್‍ಪಿ ಎಸ್.ರೋಷನ್ ಜಮೀರ್ ಮಾತನಾಡಿ, 43 ಮತಗಟ್ಟೆ ಕೇಂದ್ರಗಳಲ್ಲಿ ಅತಿ ಹೆಚ್ಚಿನ ಒತ್ತಡವಿರುವ ಮತಗಟ್ಟೆಗಳಿಗೆ ಪೊಲೀಸ್ ಬಂದೋಬಸ್ತ್ ಬೀಗಿಗೊಳಿಸಲಾಗಿದೆ. ಪ್ರತಿ ಮತಗಟ್ಟೆಗಳಿಗೂ ಪೊಲೀಸ್ ಇಲಾಖೆ ಬಂದೋಬಸ್ತ್ ವಾಹನ ನಿರಂತರ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಲಿದೆ. ಮತಗಟ್ಟೆ ಕೇಂದ್ರ ವ್ಯಾಪ್ತಿಯ ನೂರು ಮೀಟರ್ ಹಂತರದಲ್ಲಿ ಯಾವುದೇ ವಾಹನ ನಿಲುಗಡೆ, ಸಾರ್ವಜನಿಕರ ಪ್ರವೇಶ ನಿಷೇದಿಸಿದೆ. ಮತ ನೀಡಲು ಅವಶ್ಯವಿರುವ ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್, ಚಾಲನ ಪರವಾನಿಗೆ, ಪಾನ್‍ಕಾರ್ಡ್ ಇನ್ನಿತರೆ ಯಾವುದಾದರೂ ಒಂದು ದಾಖಲೆಯನ್ನು ಹೊಂದಿರಬೇಕಿದೆ. ನಗರದ 43 ಮತಗಟ್ಟೆ ಕೇಂದ್ರಗಳಲ್ಲೂ ಸಹ ಹೆಚ್ಚಿನ ಪೊಲೀಸ್ ಬಂದೋ¨ಸ್ತ್ ನಿಯೋಜಿಸಿದ್ದು, ಪ್ರತಿಯೊಬ್ಬರೂ ತಮ್ಮ ಮತವನ್ನು ಶಾಂತಿಯುತವಾಗಿ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಯಾವುದೇ ರೀತಿಯ ಆಕ್ಷೇಪಣೆಗಳಿದ್ದಲ್ಲಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link