ಯುಜಿಡಿ ಛೇಂಬರ್ ಸ್ಥಳಾಂತರಕ್ಕೆ ಒತ್ತಾಯ

ಮಧುಗಿರಿ:

ಯುಜಿಡಿ ಛೇಂಬರ್ ಸ್ಥಳಾಂತರಿಸುವಂತೆ ಚಿನ್ನಪ್ಪನಗಲ್ಲಿ, ಸಿದ್ದನಾಯಕನ ಬೀದಿ, ದೊಡ್ಡಪೇಟೆ, ಕುಂಬಾರ ಬೀದಿಯ ವಾಸಿಗಳು ಆಗ್ರಹಿಸಿದ್ದಾರೆ.

ಪಟ್ಟಣದ ಬಂಧೀಖಾನೆಯ ಹಿಂಭಾಗದಲ್ಲಿ ಯುಜಿಡಿಯ ಕಾಮಗಾರಿ ನಡೆಯುತ್ತಿದೆ. ಆದರೆ ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳಿಗೆ ಭಾವನೆಗಳಿಗೆ ದಕ್ಕೆ ಯುಂಟಾಗುತ್ತದೆ ಎಂದು ನಾಗರೀಕರು ಆರೋಪಿಸಿದ್ದಾರೆ.

ಇತಿಹಾಸ ಪ್ರಸಿದ್ದ ಶ್ರೀ ದಂಡಿನ ಮಾರಮ್ಮನ ತವರು ಮನೆ ಎಂದೇ ಖ್ಯಾತಿಗಳಿಸಿರುವ ಒಂದನೇ ಬ್ಲಾಕ್ ನಲ್ಲಿ 4 ರಸ್ತೆ ಗಳು ಕೂಡುವ ಈ ಜಾಗದಲ್ಲಿ ಅನಾದಿಕಾಲದಿಂದಲೂ ಊರ ಮಾರಮ್ಮನ ಜಾತ್ರಾ ಮಹೋತ್ಸವನ್ನು ಪಟ್ಡಣದ ಎಲ್ಲಾ ನಾಗರೀಕರು ಸೇರಿ ಸಾಂಪ್ರಾಯದಂತೆ ಪ್ರತಿ ಐದು ವರ್ಷಗಳಿಗೊಮ್ಮೆ ಆಚರಿಸುತ್ತಾ ಬಂದಿದ್ದಾರೆ.

ಈಗ ಇಲ್ಲಿ ನಿರ್ಮಾಣ ಮಾಡುತ್ತಿರುವ ಕಾಮಗಾರಿಯಿಂದಾಗಿ ಮುಂದಿನ ದಿನಗಳಲ್ಲಿ ನಡೆಯುವ ಜಾತ್ರೆಯ ಸಂಧರ್ಭದಲ್ಲಿ ವಲಸಿನ ಮೇಲೆ ದೇವಿಯನ್ನು ಕೂರಿಸಿ ಪೂಜಿಸ ಬೇಕಾದಂತಹ ವಾತವರಣ ಸೃಷ್ಟಿಯಾಗುತ್ತದೆ ಆದ್ದರಿಂದ ಕಾಮಗಾರಿಯನ್ನು ಸ್ವಲ್ಪ ದೂರಕ್ಕೆ ಸ್ಥಳಾಂತರಿಸುವುದು ಉತ್ತಮ ಎಂದು ಪ್ರಜ್ಞಾ ವಂತಹ ನಾಗರೀಕರ ಆಗ್ರಹವಾಗಿದೆ.

ವಾರ್ಡಿನ ವಾಸಿ ಟಪಾಲ್ ಮಂಜುನಾಥ್ ಮಾತನಾಡಿ ಹಲವಾರು ದಶಕಗಳಿಂದ ಸ್ಥಳದಲ್ಲಿ ಊರ ಮಾರಮ್ಮನ ಜಾತ್ರೆಯನ್ನು ಆಚರಿಸಲಾಗುತ್ತಿದೆ ಕಾಮಗಾರಿಯನ್ನು ಸ್ವಲ್ಪ ದೂರ ಕ್ಕಾದರೂ ಸ್ಥಳಾಂತರಿಸಿ ಎಂದು ಕಾಮಗಾರಿ ಆರಂಭಕ್ಕೂ ಮುನ್ನಾ ಸಂಬಂಧಪಟ್ಟ ವರಿಗೆ ತಿಳಿಸಿದರು ಮತ್ತೆ ಅಲ್ಲಿಯೇ ಕಾಮಗಾರಿ ಯನ್ನು ಪೂರ್ಣಗೊಳಿಸಿದ್ದಾರೆ ಬೇರೊಂದು ಕಡೆ ಛೇಂಬರ್ ಮಾಡಬೇಕೆಂದು ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದಾರೆ.

ವೆಂಕಟೇಶ್ ಬಾಬು ಮಾತನಾಡಿ ಈಗ ಮಾಡಿರುವ ಕಾಮಗಾರಿಯ ಬಗ್ಗೆ ಹಲವಾರು ಮುಖಂಡರಿಗೂ ಪುರಸಭಾ ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರಲಾಗಿದ್ದು ಅವರೆಲ್ಲಾ ಕಾಮಗಾರಿಯನ್ನು ಬೇರೆಡೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಇಲ್ಲಿನ ಖಾಸಗಿ ಇಂಜಿನಿಯರ್ ಗಳು ನಮ್ಮ ಕೆಲಸ ನಾವು ಮಾಡಿದ್ದೇವೆ ಯಾರಿಗೆ ಬೇಕಾದರೂ ಹೋಗಿ ಹೇಳಿಕೊಳ್ಳಿ ಎಂದು ಅಸಡ್ಡೆ ಮಾತುಗಳನ್ನು ಆಡುತ್ತಿದ್ದಾರೆ ಎಂದು ದೂರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link