ಯುವಜನತೆ ಶೋಷಣೆ ವಿರುದ್ದ ಹೋರಾಟ ರೂಪಿಸಿ ಸಮಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು- ಸಂತೋಷ್ ಹಿರೇಮಠ್

ಜಗಳೂರು:

       ಭಗತ್ ಸಿಂಗ್‍ರವರ ಆಧರ್ಶಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ಭಾರತ ದೇಶದ ಭವಿಷ್ಯದ ಬಗ್ಗೆ ಕನಸ್ಸನ್ನು ಕಂಡ ಹುತಾತ್ಮ ಸಂಗಾತಿಗಳ ಕನಸ್ಸುಗಳು ಈಡೇರಬೇಕಾದರೆ ಇಂದು ಯುವಜನತೆ ಶೋಷಣೆ ವಿರುದ್ದ ಹೋರಾಟ ರೂಪಿಸಿ ಸಮಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಎಐವೈಎಫ್ ನ ರಾಜ್ಯಸಂಚಾಲಕ ಸಂತೋಷ್ ಹಿರೇಮಠ್ ಕರೆ ನೀಡಿದರು.

         ಪಟ್ಟಣದ ಹೊಚಿ ಬೊರಯ್ಯ ಸ್ಮಾರಕ ಪದವಿ ಕಾಲೇಜಿನಲ್ಲಿ ಎಐಎಸ್‍ಎಫ್ ಹಾಗೂ ಎಐವೈಎಫ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಭಗತ್ ಸಿಂಗ್‍ರ 88ನೇ ಹುತಾತ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

        ದೇಶದಲ್ಲಿ ಇಂದು ಸ್ವತಂತ್ರವು ಕೇವಲ ರಾಜಕೀಯ ಸ್ವತಂತ್ರವೇ ಹೊರತು ಆರ್ಥಿಕ,ಸಾಮಾಜಿಕ ಸ್ವತಂತ್ರವಲ್ಲ ಅಲ್ಲದೇ ಅಸಮಾನತೆ,ಭ್ರಷ್ಟಾಚಾರದಂತಹ ಸಮಸ್ಯೆಗಳಿಂದ ದೇಶವನ್ನು ಇಂದಿಗೂ ಭಾದಿಸುತ್ತಿದೆ. ಕ್ರಾಂತಿಕಾರಿಗಳ ಸೈದ್ದಾಂತಿಕ ಬೆಳಕು ನಮ್ಮ ಕಣ್ಣಮುಂದಿರುವ ಶೋಷಣೆಯ ಕತ್ತಲೆಗಳನ್ನು ಹೋಗಲಾಡಿಸಬೇಕು ಹಾಗೂ ಅದ್ಯಯನಶೀಲತೆ,ಚಿಂತನೆಗಳು ವ್ಯಕ್ತಿತ್ವವನ್ನು ರೂಪಗೊಳಿಸುತ್ತವೆ ಈದೆಸೆಯೆಡೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

          ಎಐಎಸ್‍ಎಫ್ ನ ಜಿಲ್ಲಾದ್ಯಕ್ಷ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,ದೇಶದಲ್ಲಿ ಬಂಡವಾಳಶಾಹಿ ಪ್ರಭುತ್ವದಿಂದ ಕಾರ್ಮಿಕರು,ಮಹಿಳೆಯರು ಯುವಸಮೂಹ ಶೋಷಣೆಗೆ ಒಳಗಾಗಿದ್ದು ಆಳುವ ಸರ್ಕಾರಗಳು ಕಾರ್ಪೊರೇಟ್ ಸಂಸ್ಥೆಗಳ ಏಜೆಂಟ್‍ರಂತೆ ವತಿಸುತ್ತಾ ಸಮಾಜದಲ್ಲಿನ ನಿರುದ್ಯೋಗ,ಬಡತನದಂತಹ ಜ್ವಲಂತ ಸಮಸ್ಯೆಗಳಬಗ್ಗೆ ಕಾಳಜಿವಹಿಸದೇ ಇರುವುದು ಖಂಡನೀಯ ಎಂದರು.

        ಅಂದಿನ ಸಂದರ್ಭದಲ್ಲಿ ಭಗತ್ ಸಿಂಗ್ ರ ಕ್ರಾಂತಿಕಾರಿ ಹೋರಾಟವು ಇಡೀ ಬ್ರಿಟೀಷ್ ಸಾಮ್ರಾಜ್ಯವನ್ನು ಅಲುಗಾಡಿಸಿತ್ತು ಅಲ್ಲದೇ ದೇಶಕ್ಕೆ ಬರೀ ಸ್ವಾತಂತ್ರ ಬಂದರೆ ಸಾಕಾಗುವುದಿಲ್ಲ ಸಮಾಜವಾದಿ ಭಾರತವಾಗಬೇಕೆಂದು ಬಯಸಿದ್ದರು.ಸಮಾಜವಾದಿ ಕ್ರಾಂತಿಯ ಶಿಲ್ಪಿಯಾದ ಕಾಮ್ರೆಡ್ ಲೆನಿನ್ ರವರನ್ನು ತಮ್ಮ ಆದರ್ಶವೆಂದು ಪರಿಗಣಿಸಿದ್ದರು.ಇಂತಹ ಮಹಾನ್ ದೇಶಭಕ್ತ ಅಪ್ರತಿಮ ವೀರ ಭಗತ್‍ಸಿಂಗ್ ಅವರನ್ನು ಮರೆಮಾಚಿ ಕೆಲ ವ್ಯಕ್ತಿಗಳನ್ನು ವೈಭವೀಕರಣ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

           ಎಐಎಸ್‍ಎಫ್ ನ ರಾಜ್ಯ ಉಪಾದ್ಯಕ್ಷೆ ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾತಂತ್ರ ಸಿಕ್ಕು 7 ದಶಕಗಳು ಕಳೆದರೂ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿರುವುದು ವಿಷಾಧಕರ ಇದರ ವಿರುದ್ದ ಹೋರಾಟಕ್ಕೆ ಮಹಿಳೆಯರು ಮುಂದಾಗಬೇಕು ಎಂದು ಹೇಳಿದರು.

        ಈ ಸಂದರ್ಭದಲ್ಲಿ ದಲಿತ ಒಕ್ಕೂಟದ ತಾಲೂಕು ಮುಖಂಡ ರಾಜಪ್ಪ ವ್ಯಾಸಗೊಂಡನಹಳ್ಳಿ, ಉಪನ್ಯಾಸಕರಾದ ಸುರೇಶ್, ಸಿತಾರಮ್, ಮಹೇಶ್ ,ಮಾಚಿಕೆರೆ ಲಿಂಗರಾಜ್, ಎಐಎಸ್‍ಎಫ್ ನ ತಾಲೂಕು ಕಾರ್ಯದರ್ಶಿ ತಿಪ್ಪೇಸ್ವಾಮಿ ಎಐವೈಎಫ್ ನ ತಾಲೂಕು ಮುಖಂಡ ನಾಗರಾಜ್ ಮಲೆಮಾಚಿಕೆರೆ ಗೌಡಗೊಂಡನಹಳ್ಳಿ ಬಸವರಾಜ್ ಎಐಎಸ್‍ಎಫ್ ನ ತಾಲೂಕು ಉಪಾದ್ಯಕ್ಷೆ ರಶ್ಮಿ ಕಾನನಕಟ್ಟೆ ಮುಖಂಡರಾದ ಕೊಟ್ರೇಶ್, ರೋಜಾ, ಐಶ್ವರ್ಯ, ರಾಜು, ಸೇರಿದಂತೆ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link