ಯುವ ಶಕ್ತಿ ಪೂರಕ, ಪ್ರೇರಕ ಆಗಬೇಕು, ಮಾರಕವಾಗಕೂಡದು – ಶ್ರೀಮತಿ ಸುಮತಿ ಜಯ್ಯಪ್ಪ

 ಸಂತೇಬೆನ್ನೂರು:


      ಸಂತೇಬೆನ್ನೂರಿನ ಸ.ಪ್ರ.ದರ್ಜೆ ಕಾಲೇಜಿನ ಸಾಂಸ್ಕøತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟನ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀಮತಿ ಸುಮತಿ ಜಯ್ಯಪ್ಪನವರು ಯುವ ಶಕ್ತಿಯಿಂದ ದೇಶಕ್ಕೆ ಪೂರಕ, ಪ್ರೇರಕ ಕೆಲಸವಾಗಬೇಕೆ ಹೊರತು ಮಾರಕ ಕ್ರೀಯೆಗಳಿಂದ ಅನಾಹುತಗಳು ಆಗಕೂಡದು. ನಾವು ಜೀವಿಸುತ್ತಿರುವುದು ಸ್ಪರ್ದಾಯುಗವಾಗಿರುವುದರಿಂದ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಸಮಯವನ್ನು ಧನಾತ್ಮಕವಾಗಿ ಬಳಸಿಕೊಂಡು ತಮ್ಮದೇ ಸ್ಥಾನಗಳನ್ನು ಸಮಾಜದಲ್ಲಿ ರೂಪಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು. ಬುದ್ದಿಯ ಜೊತೆಗೆ ಭಾವನೆಗಳನ್ನು ಬೆಳಸಿಕೊಂಡು ಒಂದನ್ನು ಪಡೆದು ಹತ್ತನ್ನು ಕಳೆದುಕೊಳ್ಳಬೇಡಿ. ಸಮಯಕ್ಕನುಗುಣವಾಗಿ ಪಡೆದು ಗಳಿಸಿಕೊಳ್ಳಲು ಪ್ರಯತ್ನಿಸಿ. ವಿದ್ಯಾರ್ಥಿಗಳು ಸಾಧನೆಯ ಗುರಿಯವರಿಗೆ ಎಲ್ಲಾ ಆಸೆ, ಆಕಾಂಕ್ಷೆಗಳಿಗೆ ಬೇಲಿ ಹಾಕಿ ಎಂದು ಕಿವಿ ಮಾತು ಹೇಳಿದರು.

      ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಚನ್ನಗಿರಿ ಕ್ಷೇತ್ರದ ಶಾಸಕರಾದ ಶ್ರೀ ಮಾಡಾಳ್ ವಿರೂಪಾಕ್ಷಪ್ಪನವರು ಪ್ರಪಂಚದಲ್ಲಿಯೇ ಅತಿ ಹೆಚ್ಚು ಯುವಶಕ್ತಿ ಹೊಂದಿರುವ ದೇಶ ಭಾರತವಾಗಿದ್ದು ಅದರ ಸದ್ಭಳಕೆ ಮಾಡಿಕೊಳ್ಳುವಲ್ಲಿ ನಾವು ಸಫಲರಾಗುತ್ತಿಲ್ಲ ಆದ ಕಾರಣದಿಂದ ಇಲ್ಲಿ ಜ್ಞಾನ ಪಡೆದ ಯುವ ಶಕ್ತಿ ಕೆಲಸಕ್ಕಾಗಿ ಬೇರೆ ದೇಶಗಳಿಗೆ ಪಲಾಯಾನ ಮಾಡುತ್ತಿರುವುದು ಎಂದು ವಿಷಾದ ವ್ಯಕ್ತಪಡಿಸಿದರು. ನಮ್ಮಲ್ಲಿ ವೃತ್ತಿಪರ ಶಿಕ್ಷಣ ಪ್ರಾರ್ಥಮಿಕ ಹಂತದಲ್ಲಿಯೇ ನೀಡಿದ್ದೇ ಆದಲ್ಲಿ ನಾವು ಸಹ ಕೌಶಲ್ಯಭರಿತ ಸಾಮಾಗ್ರಿ, ಯಂತ್ರಗಳನ್ನು ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಬಹುದು ಎಂದು ನುಡಿದರು.

      ಕಾರ್ಯಕ್ರಮದಲ್ಲಿ ಜಿ.ಪ.ಸದಸ್ಯ ಪಿ.ವಾಗೀಶ್, ತಾ.ಪ.ಸದಸ್ಯೆ ಶ್ರೀಮತಿ ಸುಜಾತ ಬಸವರಾಜ್, ಗ್ರಾ.ಪಂ.ಅಧ್ಯಕ್ಷೆ ಕೆ.ಜಿ.ದೇವೇಂದ್ರಪ್ಪ, ತಾ.ಅಧ್ಯಕ್ಷ ಪಿ.ಸಿದ್ದೇಶ್, ಕೆ.ಬಸವರಾಜ್, ಹುಚ್ಚಂಗಿ ಪ್ರಸಾದ್, ರುದ್ರಮುನಿ, ಬಿ.ಓಂಕಾರಪ್ಪ, ಬ್ಯಾಟಪ್ಪ, ಹಾಲೇಶಪ್ಪ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀ ಎನ್.ಕರಿಬಸಪ್ಪನವರು ವಹಿಸಿದ್ದರು. ಪ್ರಾರ್ಥನೆ ಕುಮಾರಿ ಕನಕ, ನಿರೂಪಣೆ ಪ್ರಾಧ್ಯಾಪಕರಾದ ಶ್ರೀ ಷಣ್ಮುಖಪ್ಪ, ಸ್ವಾಗತ ಸಹಪ್ರಾಧ್ಯಾಪಕರಾದ ಶ್ರೀ ರಾಜ್‍ಕುಮಾರ್ ನಡೆಸಿಕೊಟ್ಟರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link