ಯೋಗ ಮಂದಿರ ನಿರ್ಮಾಣದ ಗುದ್ದಲಿ ಪೂಜೆ

ತುರುವೇಕೆರೆ:

               ತಾಲ್ಲೋಕಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೊಗಬಂಧುಗಳ ಬಹು ದಿನದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ತಾಲ್ಲೋಕ್ ಸಮಿತಿ ಅಧ್ಯಕ್ಷ ಆನಂದ್ ರಾಜ್ ತಿಳಿಸಿದರು.

              ಪಟ್ಟಣದ ಮೂಲೆ ಶಂಕರೇಶ್ವರ ದೇವಸ್ಥಾನದ ಕಲ್ಯಾಣಿ ರಸ್ತೆಯಲ್ಲಿ ಯೋಗ ಮಂದಿರ (ಪಾರ್ಥನಾ ಮಂದಿರ) ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪತಂಜಲಿ ಯೋಗ ಶಿಕ್ಷಣ ಸಮಿತಿ ಅನೇಕ ವರ್ಷಗಳಿಂದ ತಾಲ್ಲೋಕಿನಾದ್ಯಂತ ಯಾವುದೇ ಫಲಾಪೇಕ್ಷೆಯಿಲ್ಲದೆ ಅನೇಕ ಶಿಕ್ಷಕರಿಂದ ಉಚಿತ ಯೋಗ ತರಗತಿಗಳನ್ನು ನಡೆಸುತ್ತಾ ಸಾವಿರಾರು ಯೋಗಬಂಧುಗಳು ಯೋಗ ತರಭೇತಿ ಪಡೆಯುತ್ತಿದ್ದಾರೆ. ಪಟ್ಟಣದ ಸರಸ್ವತಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಯೋಗ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದು ತಮ್ಮದೇ ಅದ ಯೋಗಭವನದ ನಿರ್ಮಾಣ ಮಾಡಬೇಕೆಂಬ ಬಯಕೆಯಿದ್ದರೂ ಸಹಾ ಇಲ್ಲಿಯವರೆವಿಗೂ ಆ ಕಾರ್ಯ ಯೋಗಬಂಧುಗಳಲ್ಲಿ ಕನಸಾಗಿಯೇ ಉಳಿದಿತ್ತು. ಸಮಿತಿ ಸಂಚಾಲPರಾದ ಎ.ಆರ್.ರಾಮಸ್ವಾಮಿಯಣ್ಣ ಅವರ ಪ್ರೇರೇಪಣೆ ಹಾಗು ಮಾರ್ಗದರ್ಶನದಲ್ಲಿ ತಾಲ್ಲೋಕ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗಬಂಧುಗಳ ಸಹಕಾರದಿಂದ ನಿವೇಶನವೊಂದನ್ನು ಖರೀದಿಸಿ ಇಂದು ಯೋಗ ಮಂದಿರ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ.

                   ಯೋಗ ಮಂದಿರ (ಪಾರ್ಥನಾ ಮಂದಿರ) ನಿರ್ಮಾಣಕ್ಕೆ ಯೋಗಬಂಧುಗಳ ಹಾಗು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದ್ದು ಎಲ್ಲರ ಸಹಕಾರದಿಂದ ಆದಷ್ಟು ಬೇಗ ಯೋಗ ಮಂದಿರ ನಿರ್ಮಾಣಮಾಡಿ ಇದರ ಸದುಪಯೋಗ ತಾಲ್ಲೋಕಿನ ಜನತೆಗೆ ಲಭಿಸುವಂತಗಲಿ ಎಂದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap