ಯೋಧನನ್ನು ರಕ್ಷಿಸುವ ವೇಳೆ ಕೆಂಟ್ ನಿಧನ…!

ಜಮ್ಮು:

     ರಜೌರಿಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಭಾರತೀಯ ಸೇನೆಯ ಶ್ವಾನ ಮೃತಪಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನನ್ನು ರಕ್ಷಿಸುವ ವೇಳೆ ಕೆಂಟ್ ಎಂಬ ಆರು ವರ್ಷದ ಭಾರತೀಯ ಸೇನೆಯ ಶ್ವಾನ ಸಾವನ್ನಪ್ಪಿದೆ.

     ಇಬ್ಬರು ಉಗ್ರರು ಹಾಗೂ ಸೇನೆ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ ಓರ್ವ ಉಗ್ರ ಹತನಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇವರೊಂದಿಗೆ ಸೇನೆಯ ಕೆಂಟ್‌ ಎನ್ನುವ ಶ್ವಾನ ತನ್ನ ಜತೆಗಿನ ಸೈನಿಕನ ಜೀವ ಉಳಿಸಿ ಮೃತಪಟ್ಟಿದೆ.

     ಸೈನಿಕರೊಂದಿಗೆ ತೆರಳುತ್ತಿದ್ದ ಶ್ವಾನ ಭಾರಿ ಗುಂಡಿನ ದಾಳಿಯ ನಡುವೆ ಸಿಕ್ಕಿಬಿದ್ದಿತ್ತು. ನಾರ್ಲಾ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದೆ. ಕೆಂಟ್ 21 ನೇ ಆರ್ಮಿ ಡಾಗ್ ಯುನಿಟ್‌ನ ಹೆಣ್ಣು ಲ್ಯಾಬ್ರಡಾರ್ ತಳಿಯ ನಾಯಿಯಾಗಿದ್ದು, ತನ್ನ ಹ್ಯಾಂಡ್ಲರ್ ಅನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದೆ. ಕೆಂಟ್ ಕೊನೆಯುಸಿರೆಳೆಯುವ ಮುನ್ನ ಉಗ್ರರ ಜಾಡು ಹಿಡಿದು ಸೈನಿಕರನ್ನು ಅತ್ತ ಕರೆದೊಯ್ಯುತ್ತಿತ್ತು.

ಇಬ್ಬರು ಉಗ್ರರು ಇಲ್ಲಿನ ಕಾಡಿನಲ್ಲಿ ಒಳನುಸುಳುತ್ತಿರುವ ಮಾಹಿತಿಯನ್ನು ಪಡೆದ ಸೇನೆ, ‘ಆಪರೇಷನ್‌ ಸುಜಲೀಗಾಲಾ’ ಮೂಲಕ ಹುಡುಕಾಟ ನಡೆಸಿತ್ತು.

    ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹಾಗೂ ಉಗ್ರ ಬಲಿಯಾಗಿದ್ದಾರೆ. ಜೊತೆಗೆ ಇಬ್ಬರು ಸೇನೆ ಜವಾನ್‌ ಹಾಗೂ ಓರ್ವ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಕ್ಕ ಓರ್ವ ಉಗ್ರ ಪರಾರಿಯಾಗಿದ್ದಾನೆ. ಉಗ್ರರಿಂದ ಬಟ್ಟೆ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link