ತುಮಕೂರು:
ರಂಗಭೂಮಿ ಯಾವತ್ತೂ ಜೀವಂತ. ಅದು ಪ್ರೇಕ್ಷಕ ಮತ್ತು ನಟರ ಮಧ್ಯೆ ನೇರವಾಗಿ ನಡೆಯುವ ಮುಖಮುಖಿ. ಪ್ರೇಕ್ಷಕನ ಕಣ್ಣು ತಪ್ಪಿಸಿ ರಂಗಭೂಮಿಯಲ್ಲಿ ನಟ ಎಲ್ಲವನ್ನೂ ಮಾಡಲಾರ. ಅಲ್ಲಿ ಆತ ಮಾಡಿದ್ದೇ ಸರಿ. ಚಿತ್ರರಂಗದಲ್ಲಿದ್ದಂತೆ ರಿಟೀಕ್ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅರ್ಥಾತ್ ರಂಗಭೂಮಿ ನಟ ಕಲೆಯನ್ನು ಕರತಲ ಮೂಲಕ ಮಾಡಿಕೊಂಡಿರುತ್ತಾನೆ. ಅದನ್ನು ಪ್ರೇಕ್ಷಕ ಅನುಮೋದಿಸುತ್ತಾನೆ. ಒಟ್ಟಿನಲ್ಲಿ ರಂಗಭೂಮಿ ಕಲೆ, ತಾಯಿ, ತಂದೆ, ಬಂಧು ಬಳಗ ಎಲ್ಲವೂ, ಮಿಕ್ಕೆಲ್ಲಾ ಮಾಧ್ಯಮಗಳು ಅದರ ರಂಬೆ ಕೊಂಬೆಗಳು. ಅಂತಹ ನೈಜತೆಯನ್ನು ಕಲಾವಿದನಲ್ಲಿ ಮೂಡಿಸಿ, ಪ್ರತಿಭೆಯನ್ನು ಹೊಸ ಮೂಡಿಸುವ ನಾಟಕ ರಂಗ ಅಬಾಲವೃದ್ಧರಾಗಿ ಪ್ರೀತಿಸುವ, ಗೌರವಿಸುವ ಸಾಧನವಾಗಿದೆ ಎಂದು ಹುಣಸೇಪಾಳ್ಯದ ಬೆಳ್ಳಿ ಕಿರೀಟ ಪ್ರಶಸ್ತಿ ಪುರಸ್ಕøತ ಹೆಚ್.ಸಿ. ಜಗದೀಶ್ ತಿಳಿಸಿದರು.
ನಗರದ ದೇವರಾಯಪಟ್ಟಣದಲ್ಲಿ ಇತ್ತೀಚೆಗೆ ನಡೆದ ಶ್ರೀಕೃಷ್ಣ ಕಲಾ ಸಂಘದ ಆಶ್ರಯದಲ್ಲಿ ಗಾಜಿನ ಮನೆಯಲ್ಲಿ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು. ಚಿಕ್ಕಣ್ಣಸ್ವಾಮಿ ಶ್ರೀಕ್ಷೇತ್ರದ
ಧರ್ಮದರ್ಶಿ ಡಾ.ಪಾಪಣ್ಣ, ಅಮ್ಮನಹಟ್ಟಿ ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಯ್ಯ ಹಾಗೂ ನೆಟ್ಟಕೆರೆ ಹಟ್ಟಿ ಶ್ರೀಕ್ಷೇತ್ರದ ಪ್ರಧಾನ ಅರ್ಚಕರಾದ ಚಿಕ್ಕಣ್ಣಯ್ಯ ನೇತೃತ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡ ಬೆಟ್ಟಸ್ವಾಮಿ ಮುಂತಾದವರು ಉಪಸ್ಥಿತರಿದ್ದರು