ತುಮಕೂರು
ನಗರಗಳಲ್ಲಿ ಬಡಾವಣೆಗೆ ಒಂದರಂತೆ ರಂಗಸ್ಥಳ, ಅದೇರೀತಿ ಜಿಲ್ಲೆಗೆ ಹತ್ತು ರಂಗಸ್ಥಳಗಳು ನಿರ್ಮಾಣವಾಗಬೇಕು.ಆಗ ಮಾತ್ರ ನಮ್ಮ ದೇಶೀಯ ಸಂಸ್ಕೃತಿ ಬೆಳೆಯಲು ಸಾಧ್ಯ.ಸ್ಥಳೀಯ ಆಡಳಿತಗಳು ಕಲೆ ಸಾಹಿತ್ಯ ಸಂಸ್ಕತಿಗೆ ಮೀಸಲಿಟ್ಟಿರುವ ಹಣವನ್ನು ಬಳಸುತ್ತಿಲ್ಲ, ಅಂತಹ ಆಡಳಿತಗಳು ಮಾಡುವ ಕೆಲಸವನ್ನುಒಂದುಗ್ರಾಮೀಣರಂಗಸಂಸ್ಥೆಯಾದ ಮೆಳೇಹಳ್ಳಿಯ ಡಮರುಗರಂಗತಂಡ ಮಾಡುತ್ತಿರುವುದು ಶ್ಲಾಘನೀಯ.ನಾಡಿನ ಪ್ರಸಿದ್ಧ ನಾಟಕಗಳನ್ನು ಆಯೋಜನೆ ಮಾಡುತ್ತಿರುವಈ ಸಂಸ್ಥೆಗೆಗ್ರಾಮೀಣಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಟಕಕಲೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ರಂಗನೇಪಥ್ಯ ಸಂಪಾದಕರಾದ ಶ್ರೀ ಗುಡಿಹಳ್ಳಿ
ನಾಗರಾಜು ಅಭಿಪ್ರಾಯಪಟ್ಟರು.ನಂತರ ಮಾತನಾಡಿದ ಭೂಮಿ ಬಳಗದ ಸೋಮಣ್ಣ, ಕೆಲವು ವ್ಯಕ್ತಿಗಳು ಕೆಲವು ವಿಷಯಗಳಲ್ಲಿ ಮಾದರಿಯಾಗಿದ್ದಾರೆ, ಹಾಗೆಯೇಡಮರುಗ ಸಂಸ್ಥೆ ರಂಗಭೂಮಿಯಲ್ಲಿ ತುಮಕೂರು ಜಿಲ್ಲೆಗೇ ಮಾದರಿಯಾಗಿದೆ ಎಂದರು.ಸಮಾರಂಭದಲ್ಲಿ ತುಮಕೂರು ಭ್ರಷ್ಟಾಚಾರ ವಿರೋಧಿ ದಳದ ಜಿಲ್ಲಾಧ್ಯಕ್ಷರಾದ ಗಣೇಶ್ ಪ್ರಸಾದ್, ಅರಕೆರೆ ಉದ್ಯಮಿಗಳಾದ ಶ್ರೀ ಕಾಂತರಾಜು, ಶಿವಮೊಗ್ಗ ರಂಗಾಯಣದ ನಿರ್ದೇಶಕರಾದಡಾ.ಎಂ.ಗಣೇಶ್ ಹಾಗೂ ರಂಗನಿರ್ದೇಶಕರಾದ ಮೆಳೇಹಳ್ಳಿ ದೇವರಾಜು ಉಪಸ್ಥಿತರಿದ್ದರು.








