ರಷ್ಯಾದಿಂದ ಮಾಯವಾಗಿ ‘ವ್ಯಾಗ್ನರ್‌’ ಗುಂಪಿನ ಮುಖ್ಯಸ್ಥ ಪತ್ತೆಯಾಗಿದ್ದಾದರು ಎಲ್ಲಿ ಗೊತ್ತಾ…!

ಮಾಸ್ಕೊ: 

    ರಷ್ಯಾ ಸೇನಾ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದ ಖಾಸಗಿ ಸೇನಾ ಪಡೆ ‘ವ್ಯಾಗ್ನರ್‌’ ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್‌ ಅವರು ವಿಡಿಯೊ ಸಂದೇಶದಲ್ಲಿ ಕಾಣಿಸಿಕೊಂಡಿದ್ದಾರೆ.ಯೆವ್ಗೆನಿ ಪ್ರಿಗೋಷಿನ್‌ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಅವರ ವಿಡಿಯೊ ಸಂದೇಶ ಸಾಮಾಜಿಕ ಜಾಲತಾಣ ಟೆಲಿಗ್ರಾಂನಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೊ ಅಧಿಕೃತ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.’ವ್ಯಾಗ್ನರ್‌’ ಗುಂಪು ವಿದೇಶಗಳಲ್ಲಿ ಇಸ್ಲಾಮಿಕ್‌ ಉಗ್ರರು ಹಾಗೂ ಇತರೆ ಅಪರಾಧಿಗಳ ವಿರುದ್ಧ ಹೋರಾಡುತ್ತಿದೆ ಎಂದು ಯೆವ್ಗೆನಿ ಪ್ರಿಗೋಷಿನ್‌ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜೂನ್‌ನಲ್ಲಿ ರಷ್ಯಾ ಪಡೆಗಳು ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ವಿರುದ್ಧವೇ ‘ವ್ಯಾಗ್ನರ್‌’ ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್‌ ಬಂಡಾಯವೆದ್ದಿದ್ದರು. ನಂತರ ಮಾತುಕತೆಗಳ ಮೂಲಕ ಈ ಬಂಡಾಯ ತಣ್ಣಗಾಗಿದೆ.

ಪುಟಿನ್‌ ಅವರ ಆಪ್ತರಾಗಿದ್ದ ಯೆವ್ಗೆನಿ ಪ್ರಿಗೋಷಿನ್, ಪುಟಿನ್‌ ಬೆಂಬಲದಿಂದಲೇ 2014ರಲ್ಲಿ ‘ವ್ಯಾಗ್ನರ್’ ಎಂಬ ಖಾಸಗಿ ಮಿಲಿಟರಿ ಪಡೆ ಕಟ್ಟಿದ್ದರು. ಉಕ್ರೇನ್‌ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ‘ವ್ಯಾಗ್ನರ್’ ಗುಂಪು ಮಹತ್ವದ ಪಾತ್ರವಹಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link