ಮಿಡಿಗೇಶಿ
ಯುಗಾದಿ ಹಬ್ಬದ ಹಿಂದಿನ ದಿನ ಏ.5 ರಂದು ಮಧುಗಿರಿಯಿಂದ ಪಾವಗಡ ರಾಜ್ಯ ಹೆದ್ದಾರಿ ಕೆ.ಶಿಪ್ ರಸ್ತೆಯ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಲಕ್ಲೀಹಟ್ಟಿ ಗ್ರಾಮದ ಬಳಿ ಸಂಜೆ 6-30 ರ ಸಮಯದಲ್ಲಿ ಲಕ್ಲೀಹಟ್ಟಿ ಗ್ರಾಮದ ಕುರಿ ತಮ್ಮಣ್ಣ ಅವರಿಗೆ ಸೇರಿದ 30 ಕುರಿಗಳ ಮೇಲೆ ಲಾರಿಯೊಂದು (ಕೆ.ಎ.19.ಎ.ಬಿ.3962) ಸದರಿ ವಾಹನ ಮಧುಗಿರಿ ಕಡೆಯಿಂದ ಪಾವಗಡಕ್ಕೆ ಹೋಗುವಾಗ ಅತಿ ವೇಗವಾಗಿ ಬಂದು ಕುರಿಗಳ ಮೇಲೆ ಲಾರಿ ಹರಿದಿದ್ದು 30 ಕುರಿಗಳು ಸ್ಥಳದಲ್ಲೇ ಸತ್ತಿದ್ದು ಇವುಗಳ ಅಂದಾಜು ಮೊತ್ತ 200000-00 (ಎರಡು ಲಕ್ಷ) ರೂಗಳಾಗಿರುತ್ತದೆ.
ಇದೇ ತಾಲ್ಲೂಕಿನ ಬ್ರಹ್ಮಸಮುದ್ರ ಗೊಲ್ಲರಹಟ್ಟಿಯ ರಂಗಮಣಿ ಮತ್ತು ಪತಿ ಸುರೇಶ್ ಸದರಿಯವರು ದ್ವಿಚಕ್ರವಾಹನದಲ್ಲಿ (ಕೆ.ಎ.64-ಇ-7674) ಪ್ರಯಾಣ ಮಾಡುತ್ತಿದ್ದು. ಅವರಿಗೆ ಕೆಳಗೆ ಬಿದ್ದು ಸಣ್ಣಪುಟ್ಟ ರಕ್ತಗಾಯಗಳಾಗಿದ್ದು ಗಾಯಾಳುಗಳನ್ನು 108 ಆಂಬುಲೆನ್ಸ್ನಲ್ಲಿ ರಕ್ಷಣಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಮಧುಗಿರಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.
ಘಟನಾ ಸ್ಥಳಕ್ಕೆ ಮಿಡಿಗೇಶಿ ಪಿ.ಎಸ್.ಐ. ಗಂಗಾಧರ್ ಹಾಗೂ ಸಿಬ್ಬಂದಿ ಬೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದು ಅಪಘಾತವೆಸಗಿದ ಲಾರಿಯನ್ನು ವಶಕ್ಕೆ ಪಡೆದಿರುತ್ತಾರೆ ಹಾಗೂ ಪಿ.ಎಸ್.ಐ ಗಂಗಾಧರ್ ರವರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.