ತುಮಕೂರು :
ನನ್ನ ರಾಜಕೀಯ ಜೀವನ ಇಲ್ಲಿಗೆ ಮುಗಿದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡೇ ಹೊಸ ಇನ್ನಿಂಗ್ಸ್ ಆರಂಭಿಸುತ್ತೇನೆ ಎಂದು ಸಂಸದ ಮುದ್ದಹನುಮೇಗೌಡ ತಿಳಿಸಿದ್ದಾರೆ.
ಇಂದು ಖಾಸಗಿ ಹೋಟೆಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಾನು ನೀರೀಕ್ಷೆ ಮಾಡದಂತಹ ಬೆಳವಣಿಗೆ ನಡೆದಿತ್ತು. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಆದ್ದರಿಂದ ನಾನು ಚುನಾವಣೆ ಫಲಿತಾಂಶಕ್ಕೆ ಕಾಯಬೇಕಿಲ್ಲ. ಆದರೆ ನನ್ನ ರಾಜಕೀಯ ಜೀವನದ ಅಧ್ಯಾಯ ಮುಗಿದಿಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಹೊಸ ಇನ್ನಿಂಗ್ಸ್ ಆರಂಭಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಾನು ಕಳೆದ ವರ್ಷದ ಅವಧಿಯಲ್ಲಿ ಎಲ್ಲಾ ಜನ ಪ್ರತಿನಿಧಿಗಳು ವಿಶ್ವಾಸ ಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸಿದೆ. ಅಧಿಕಾರಿಗಳು ಸೇರಿದಂತೆ ಜನರು ನಮ್ಮ ಮೇಲೆ ಅಪಾರ ವಾದ ವಿಶ್ವಾಸ ಇಟ್ಟಿದ್ದರು. ಇದು ನನ್ನ ಜನ್ಮ ಸಾರ್ಥಕ ವಾಯಿತು. ನಾನು ಮುಂದೆಯೂ ಇದೇ ರೀತಿ ಜನರ ಜೊತೆ ಬದುಕು ಸಾಗಿಸುತ್ತೇನೆ. ರಾಜ್ಯ ಸರ್ಕಾರ ಸೇರಿದಂತೆ ಹಲವಾರು ಸಚಿವರು ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.
ನನ್ನ ಅವಧಿಯಲ್ಲಿ ಇಸ್ರೊ, ಹೆಚ್ ಎ ಎಲ್ ಘಟಕಗಳು ಆರಂಭವಾಗಿದ್ದು ಮಹತ್ವ ಪಡೆದಿದೆ. ಇಂತಹ ಯೋಜನೆಗಳನ್ನು ಜಿಲ್ಲೆಗೆ ತಂದೆ ಈ ಹೆಮ್ಮೆ ನನಗೆ ಇದೆ ಇಂದು ರಾಜ್ಯದ ಜಿಲ್ಲೆಯ ಜನರಿಗೆ ತಿಳಿದಿದೆ. ಕಳೆದ ಐದು ವರ್ಷಗಳಲ್ಲಿ ಉತ್ತಮ ಸಂಸದನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು ಅಲ್ಲದೆ ಸಂಸತ್ ನಲ್ಲಿ ಹಲವು ಬಿಲ್ಲುಗಳು ಪಾಸ್ ಅದವು ಇದು ನಮಗೆ ಹೆಮ್ಮೆ ತಂದಿದೆ ಎಂದರು.
ಅಲ್ಲದೇ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ, ವಿವಿಧ ಯೋಜನೆಗಳ ರೈಲ್ವೆ ಕಾಮಗಾರಿಗಳು ಆರಂಭ ವಾಗಿವೆ, ಸ್ಮಾರ್ಟ್ ಸಿಟಿ ಯೋಜನೆ, ಪಾಸ್ ಪೋರ್ಟ್ ಕಛೇರಿ ಅರಂಭ ಸೇರಿದಂತೆ ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ. ಜಿಲ್ಲೆಯ ಉತ್ತಮ ಸಂಸದನಾಗಿ ಕೆಲಸ ಮಾಡಲು ಮಾಧ್ಯಮದವರ ಸಹಕಾರ ಅವಿಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನನಗೆ ಟಿಕೆಟ್ ಸಿಗದೇ ಇದ್ದರೂ ಪಕ್ಷ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದೆ ಎಂದು ತಿಳಿಸಿದ ಅವರು, ಇದೇ ತಿಂಗಳ ಅಂತ್ಯಕ್ಕೆ ತಮ್ಮ ಅಧಿಕಾರ ಅವಧಿ ಅಂತ್ಯಗೊಳ್ಳಲಿದ್ದು ಸಹಕಾರ ನೀಡಿದ ಜನತೆ, ಅಧಿಕಾರಿಗಳು ಹಾಗೂ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.
ನನ್ನ ಮೇಲೆ ಬಂದ ಮೂರು ವರೆ ಕೋಟಿ ಆರೋಪ ಬಂದಿತ್ತು ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಅಲ್ಲಿ ಮಾತನಾಡಿದ್ದೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಲ್ಲಿ ಸ್ಥಳದ ಮಹತ್ವ ಹಿನ್ನೆಲೆಯಲ್ಲಿ ಹೇಳಿದ್ದೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ