ಬೆಂಗಳೂರು:
ಬೆಂಗಳೂರಿನಲ್ಲಿರುವ ರಾಜಭವನ ವೀಕ್ಷಿಸಲು ಪ್ರವೇಶ ಕಲ್ಪಿಸಲಾಗುವುದು ಎಂದು ರಾಜ್ಯಪಾಲರಾದ ವಾಜೂಬಾಯಿ ವಾಲಾ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಬ್ರಿಟೀಷರ ಕಾಲದ ಈ ಕಟ್ಟಡವನ್ನು ನೋಡಲು ಜನರಿಗೆ ತುಂಬಾ ಕುತೂಹಲವಿರುತ್ತದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 21 ರವರೆಗೆ ನೋಡಲು ಅನುಮತಿ ನೀಡಲಾಗುವುದು. ಅದರಲ್ಲೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಹೆಚ್ಚಿನ ಬೇಡಿಕೆ ಬಂದರೆ, ವರ್ಷಕ್ಕೆ ಎರಡು ಬಾರಿ ನೋಡಲು ಅವಕಾಶ ಒದಗಿಸಲಾಗುವುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
