ಬೆಂಗಳೂರು :
ರಾಜ್ಯದಲ್ಲಿ ಇಂದು ಬರೋಬ್ಬರಿ 105 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 1710 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು,ಚಿಕ್ಕಬಳ್ಳಾಪುರದಲ್ಲಿ ಕಳೆದ 24 ಗಂಟೆಯಲ್ಲಿ 51 ಪ್ರಕರಣ , ಹಾಸನ 14, ಬೆಂಗಳೂರು 5, ಚಿಕ್ಕಮಗಳೂರು 5, ಹಾವೇರಿ 3, ತುಮಕೂರು 8, ಬೆಂಗಳೂರು ಗ್ರಾಮಾಂತರ 4, ಬೀದರ್ 6, ಮಂಡ್ಯ 3, ಧಾರವಾಡ 2, ವಿಜಯಪುರ 2, ಬಾಗಲಕೋಟೆ, ಚಿತ್ರದುರ್ಗ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.
ಇನ್ನು ಇಂದು ಸೋಂಕು ಪತ್ತೆಯಾದವರಲ್ಲಿ 10 ವರ್ಷದ ಒಳಗಿನ 7 ಮಕ್ಕಳಿದ್ದರೆ, 41 ಜನ ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಇಂದು ಪತ್ತೆಯಾದ 105 ಕೇಸ್ಗಳಲ್ಲಿ ಬರೋಬ್ಬರಿ 83 ಕೇಸ್ಗಳಿಗೆ ನೇರವಾಗಿ ಮುಂಬೈ ನಂಟಿದೆ.
ಕೋವಿಡ್19: ಮಧ್ಯಾಹ್ನದ ವರದಿ 22/05/2020#KarnatakaFightsCorona #IndiaFightsCoronavirus pic.twitter.com/z4bJiJCjt4
— B Sriramulu (@sriramulubjp) May 22, 2020
ಈ ಮೂಲಕ ಕರ್ನಾಟಕದಲ್ಲಿ ಇಂದು 105 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ 1710 ಕ್ಕೆ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
