ರಾಜ್ಯದಲ್ಲಿ ತುಮಕೂರು ಪಾಲಿಕೆಯ ಪ್ರಥಮ ಹೆಜ್ಜೆ: ‘ಪೇಟಿಎಂ’ ಮೂಲಕ ತೆರಿಗೆ ಪಾವತಿ ಸೌಲಭ್ಯ

ತುಮಕೂರು

                ತೆರಿಗೆ ಸಂಗ್ರಹದ ವಿಷಯದಲ್ಲಿ ಮತ್ತೊಂದು ವಿನೂತನ ಹೆಜ್ಜೆ ಇರಿಸಿರುವ ತುಮಕೂರು ಮಹಾನಗರ ಪಾಲಿಕೆಯು ಇದೀಗ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ‘ಪೇಟಿಎಂ’ ಮೂಲಕ ತೆರಿಗೆ ಪಾವತಿಸುವ ಸುಲಭ ಸೌಲಭ್ಯ ವನ್ನು ನಾಗರಿಕರಿಗೆ ಒದಗಿಸಿದೆ.
ನಗರದ ತೆರಿಗೆದಾರ ನಾಗರಿಕರು ಇದೀಗ ತಮ್ಮ ಸ್ಮಾರ್ಟ್ ಫೋನ್ ಮೂಲಕ ತಾವಿರುವ ಸ್ಥಳದಿಂದಲೇ ಮಹಾನಗರ ಪಾಲಿಕೆಗೆ ಸಂಬಂಧಿಸಿದ ಆಸ್ತಿ ತೆರಿಗೆ, ನೀರಿನ ತೆರಿಗೆ, ಒಳಚರಂಡಿ ಯೋಜನೆ (ಯುಜಿಡಿ) ಶುಲ್ಕವನ್ನು ಕ್ಷಣಾ‘ರ್ದಲ್ಲಿ ಪಾವತಿ ಮಾಡಬಹುದಾಗಿದೆ.

             ಇದರೊಂದಿಗೆ ನಗರದ ತೆರಿಗೆದಾರರು ತೆರಿಗೆ ಪಾವತಿಗಾಗಿ ಪಾಲಿಕೆ ಕಚೇರಿಗೆ ಅಲೆದಾಡುವುದು, ಸರತಿ ಸಾಲಿನಲ್ಲಿ ನಿಲ್ಲುವುದು, ಸಾಕಷ್ಟು ಕಾದು ತೆರಿಗೆ ಪಾವತಿಸುವುದು ಮೊದಲಾದ ಸಮಸ್ಯೆಗಳು ಹಾಗೂ ಕಿರಿಕಿರಿಗಳು ಪರಿಹಾರವಾದಂತಾಗಲಿವೆ.
‘‘ಮೊನ್ನಿನ ಬಜೆಟ್ ಮಂಡನೆ ಸಂದ‘ರ್ದಲ್ಲಿ ತೆರಿಗೆ ಪಾವತಿಗೆ ‘ಪೇಟಿಎಂ’ ಅಳವಡಿಕೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದನ್ನೀಗ ಜಾರಿಗೆ ತರಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಇಂಥ ಸೌಲಭ್ಯ ಅಳವಡಿಸಿದ ಕೀರ್ತಿ ತುಮಕೂರು ಪಾಲಿಕೆಯದ್ದಾಗಿದೆ’’ ಎಂದು ಮೂಲಗಳು ‘ಪ್ರಜಾಪ್ರಗತಿ’ಗೆ ಹೇಳಿವೆ.

            ‘‘ಸಾರ್ವಜನಿಕರು ತಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ಮೊದಲಿಗೆ ‘ಪೇಟಿಎಂ’ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ, ಅಳವಡಿಸಿಕೊಳ್ಳಬೇಕು. ಬಳಿಕ ಅದನ್ನು ತೆರೆದಾಗ, ಮುನಿಸಿಪಲ್ ಪೇಮೆಂಟ್ ಅಥವಾ ನೀರಿನ ಶುಲ್ಕ ಎಂಬ ವಿಭಾಗಗಳು ಕಾಣುತ್ತವೆ. ಅದನ್ನು ಪ್ರವೇಶಿಸಿದಾಗ ದೇಶದ ವಿವಿ‘ ಮಹಾನಗರ ಪಾಲಿಕೆಗಳ ಲೋಗೋ ಸಹಿತ ಪ್ರತ್ಯೇಕ ವಿಭಾಗಗಳು ಕಂಡುಬರುತ್ತವೆ. ಅದರಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆಯ ಹೆಸರು ಮತ್ತು ಲೋಗೋ ಕಾಣಿಸುತ್ತದೆ. ಅದನ್ನು ಪ್ರವೇಶಿಸಿ, ಅಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ, ಒಳಚರಂಡಿ ಯೋಜನೆ ಶುಲ್ಕ ಎಂಬ ಪ್ರತ್ಯೇಕ ವಿಭಾಗಗಳು ತೆರೆದುಕೊಳ್ಳುತ್ತವೆ. ಅದರಲ್ಲಿ ತೆರಿಗೆದಾರರು ತಮಗೆ ಬೇಕಾದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ತಮ್ಮ ಗ್ರಾಹಕ ಸಂಖ್ಯೆ (ಪಿಐಡಿ ಸಂಖ್ಯೆ) ನಮೂದಿಸಿದರೆ, ಒಡನೆಯೇ ಅವರು ಸಲ್ಲಿಸಬೇಕಾಗಿರುವ ತೆರಿಗೆ/ಶುಲ್ಕದ ವಿವರ ಮೂಡಿಬರುತ್ತದೆ. ಸದರಿ ಮೊತ್ತವನ್ನು ತಕ್ಷಣವೇ ಪಾವತಿ ಮಾಡಬಹುದು. ಪಾವತಿ ವಿವರವನ್ನು ಅವರು ಸದರಿ ‘ಪೇಟಿಎಂ’ನ ಪಾವತಿ ಇತಿಹಾಸವನ್ನು ಪರಿಶೀಲಿಸಿದರೆ ತಿಳಿಯುತ್ತದೆ’’ ಎಂದು ಮೂಲಗಳು ಸದರಿ ಪ್ರಕ್ರಿಯೆಯನ್ನು ವಿವರಿಸಿವೆ.

               ‘‘ಇದೇ ಹೊತ್ತಿಗೆ ಪಾಲಿಕೆ ಕಚೇರಿಯಲ್ಲೂ ತೆರಿಗೆ ಪಾವತಿಯಾದ ವಿವರವು ದಾಖಲಾಗುತ್ತದೆ. ಯಾರು, ಯಾವ ರೀತಿ ಪಾವತಿಸಿದ್ದಾರೆ ಎಂಬುದೂ ಈ ದಾಖಲೆಯಲ್ಲಿರುತ್ತದೆ’’ ಎಂದು ಮೂಲಗಳು ಹೇಳಿವೆ.

                 ‘‘ಪಾಲಿಕೆಯಲ್ಲಿ ಈಗಾಗಲೇ ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡುವ ಸೌಲಭ್ಯ ಜಾರಿಯಲ್ಲಿದೆ. ಅದರ ಮುಂದುವರೆದ ಭಾಗವಾಗಿ ಈಗ ‘ಪೇಟಿಎಂ’ ಸೌಲಭ್ಯ ವನ್ನು ಅಳವಡಿಸಲಾಗಿದೆ. ಈ ಸೇವೆ ಬಳಸಿಕೊಳ್ಳಲು ಸಾರ್ವಜನಿಕರಿಗೆ ಯಾವುದೇ ಸೇವಾಶುಲ್ಕ ಇರುವುದಿಲ್ಲ. ಪಾಲಿಕೆಯ ಡಿಜಿಟಲೀಕರಣದ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ’’ ಎಂದು ಮೂಲಗಳು ತಿಳಿಸಿವೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap