ರಾಜ್ಯದಿಂದ ಮಾಯವಾದ ರಮ್ಯ ಜರ್ಮನಿಯಲ್ಲಿ ಪ್ರತ್ಯಕ್ಷ

ಬೆಂಗಳೂರು:

               ಎಐಸಿಸಿ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ಹಾಗೂ ನಟಿ ರಮ್ಯಾ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯದಿಂದಲೇ ನಾಪತ್ತೆಯಾಗಿದ್ದ ರಮ್ಯ ಇದೀಗ ಜರ್ಮನ್ ಪ್ರವಾಸದಲ್ಲಿರುವುದು ಬೆಳಕಿಗೆ ಬಂದಿದೆ.

               ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಮಿಲಿಂದ್ ದಿಯೋರಾ ವಿವಿಧ ಕಾರ್ಯಕ್ರಮಗಳ ನಿಮಿತ್ತ ಜರ್ಮನ್ ಪ್ರವಾಸದಲ್ಲಿದ್ದು, ಈ ಮಧ್ಯೆ ಎಐಸಿಸಿ ಸೋಷಿಯಲ್ ಮೀಡಿಯ ವಿಭಾಗದ ಮುಖ್ಯಸ್ಥೆ ನಟಿ ರಮ್ಯಾ ಕೂಡಾ ಅವರೊಂದಿಗೆ ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ.

              ರಾಹುಲ್ ಪ್ರವಾಸದ ವಿವಿಧ ಕ್ಷಣಗಳನ್ನು, ಕರ್ನಾಟಕ ಉಸ್ತುವಾರಿಯಾಗಿರುವ ಎಐಸಿಸಿ ಕಾರ್ಯದರ್ಶಿ ಮಧು ಯಸ್ಕಿ ಗೌಡ್ ಜತೆಗಿನ ಫೋಟೊಗಳನ್ನು ರಮ್ಯಾ, ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಕಾಂಗ್ರೆಸ್ ಮುಖಂಡ ಮಿಲಿಂದ್ ದಿಯೋರಾ ಜತೆಗೆ ರಮ್ಯಾ ಇರುವ ಫೋಟೊ ವೈರಲ್ ಆಗಿದ್ದು, ಮಿಲಿಂದ್ ದಿಯೋರ ಜತೆ ತಾವು 18 ವರ್ಷದಿಂದ ಸ್ನೇಹ ಹೊಂದಿರುವುದಾಗಿ ರಮ್ಯಾ ಟ್ವೀಟ್ ಮಾಡಿದ್ದಾರೆ.

Recent Articles

spot_img

Related Stories

Share via
Copy link