ಬೆಳಗಾವಿ : ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯ ಭೀಕರ ಹತ್ಯೆ ತಪ್ಪಿಸಲು ವಿಫಲವಾದ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಪ್ರತಿಷ್ಟಿತ ಹೋಟೆಲ್ ಗಳು ಹಾಗೂ ಪಂಚತಾರಾ ರೆಸಾರ್ಟ್ ಗಳಲ್ಲಿ, ಭದ್ರತಾ ಪರಿಶೀಲನೆ ( ಸೇಫ್ಟಿ ಆಡಿಟ್) ನಡೆಸಬೇಕೆಂದು, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ.
ಈ ಕುರಿತು, ಸಚಿವರು ರಾಜ್ಯದ ಪೊಲೀಸರಿಗೆ ಸೂಚನೆ ನೀಡಿದ್ದು, ಪರವಾನಗಿ ಪಡೆಯುವ ಪೂರ್ವದಲ್ಲಿ, ವಿಧಿ ಸಲಾದ ರಕ್ಷಣಾ ಸಂಬಂಧ ನಿಯಮಾವಳಿಗಳನ್ನು, ಹೋಟೆಲ್ಗಳು ಹಾಗೂ ಪ್ರತಿಷ್ಟಿತ ರೆಸಾರ್ಟ್ಗಳು ಪಾಲಿಸುತ್ತಿವೆಯೇ ಎಂಬುದರ ಬಗ್ಗೆ ಪರಿಶೀಲನೆ ಆಗಬೇಕಿದೆ, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವುದಾದರೂ ಹೋಟೆಲ್ಗಳು ಅಥವಾ ಪ್ರತಿಷ್ಟಿತ ರೆಸಾರ್ಟ್ ಗಳು, ರಕ್ಷಣಾ ಸಂಬಂಧ ನಿಯಮಾವಳಿಗಳನ್ನು ಪಾಲಿಸಲು ವಿಫಲವಾಗಿದ್ದರೆ, ಅಗತ್ಯ ಕಾನೂನು ಕ್ರಮ ಜರುಗಿಸುವಂತೆ, ನಿರ್ದೇಶಿಸಿದ್ದಾರೆ.
ನಿನ್ನೆ ಹೋಟೆಲ್ ವ್ಯವಸ್ಥಾಪಕರು, ತನ್ನ ಅತಿಥಿಗಳಿಗೆ ಸರಿಯಾದ ರಕ್ಷಣಾ ವ್ಯವಸ್ಥೆ ಒದಗಿಸದೆ ಇದ್ದದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ, ಎಂದೂ ಗೃಹ ಸಚಿವರು, ತಿಳಿಸಿದ್ದಾರೆ.