ರಾಜ್ಯ ಬಜೆಟ್‌ : ಯಾವ ಯಾವ ಇಲಾಖೆಗೆ ಎಷ್ಟು ಅನುದಾನ….?

ಬೆಂಗಳೂರು

       ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್‌ ಅನ್ನು ಮಂಡಿಸಿದ್ದಾರೆ. ಈ ಬಾರಿ ಗ್ಯಾರಂಟಿಗಳಿಗೆ ಒತ್ತು ನೀಡುವ ಅವರು ಸರ್ವಸ್ಪರ್ಶಿ ಬಜೆಟ್‌ ಅನ್ನು ಮಂಡಿಸಿದ್ದಾರೆ. ಈ ಬಾರಿ ಬಜೆಟ್ ಗಾತ್ರ 3,27,747 ಲಕ್ಷ ಕೋಟು ರೂ ಗಾತ್ರದ್ದಾಗಿದೆ. ಇದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಯೇ 7ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. 3.27 ಲಕ್ಷ ಕೋಟಿ ರೂ ಬಜೆಟ್​ನಲ್ಲಿ ಸಾಲ ಮರುಪಾವತಿಗೆ 22,441 ಕೋಟಿ ರೂ ವ್ಯಯವಾಗಲಿದೆ. ಇನ್ನು ಬಂಡವಾಳ ಹೂಡಿಕೆಗಳಿಗೆ 54,374 ಕೋಟಿ ರೂ ವೆಚ್ಚ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 

   ಐದು ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ರೂ ವ್ಯಯವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ, ಕೇಂದ್ರದಿಂದ ತೆರಿಗೆ ಪಾಲಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ. ಕರ್ನಾಟಕ ಹೆಚ್ಚು ತೆರಿಗೆ ಸಂಗ್ರಹಿಸಿದರೂ ಶೇ. 3.65ರಷ್ಟು ಮಾತ್ರ ತೆರಿಗೆ ಪಾಲು ಸಿಗುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ದ್ರೋಹ ಬಗೆಯಲಾಗಿದೆ ಎಂದು ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.

     ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿದ ಅನುದಾನ

1. ಶಿಕ್ಷಣ: 37,587 ಕೋಟಿ ರೂ., 2. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 24,166 ಕೋಟಿ ರೂ., 3. ನೀರಾವರಿ: 19,044 ಕೋಟಿ, 4. ಇಂಧನ: 22,773 ಕೋಟಿ 5. ಗ್ರಾಮೀಣಾಭಿವೃದ್ಧಿ ಇಲಾಖೆ: 18,038 ಕೋಟಿ 6. ಒಳಾಡಳಿತ ಮತ್ತು ಸಾರಿಗೆ: 16,638 ಕೋಟಿ 7. ಕಂದಾಯ ಇಲಾಖೆ: 16,167 ಕೋಟಿ 8. ಆರೋಗ್ಯ ಇಲಾಖೆ: 14,950 ಕೋಟಿ 9. ಸಮಾಜ ಕಲ್ಯಾಣ ಇಲಾಖೆ: 11,173 ಕೋಟಿ 10. ಆಹಾರ ಮತ್ತು ನಾಗರಿಕ ಪೂರೈಕೆ: 10,460 ಕೋಟಿ 11. ಲೋಕೋಪಯೋಗಿ ಇಲಾಖೆ: 10,143 ಕೋಟಿ 12. ಕೃಷಿ: 5,860 ಕೋಟಿ 13. ಪಶುಸಂಗೋಪನೆ ಮತ್ತು ಮೀನುಗಾರಿಕೆ: 3,024 ಕೋಟಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap