ರಾಧಾಕೃಷ್ಣನ್‍ರವರ ವ್ಯಕ್ತಿತ್ವ ವಿಶಾಲವಾದದ್ದು : ನಿತ್ಯಾನಂದಮೂರ್ತಿ

ತಿಪಟೂರು
            ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ವ್ಯಕ್ತಿತ್ವ ವಿಶಾಲವಾದದ್ದು, ಅವರು ಅಪಾರ ಜ್ಞಾನ ಸಂಪತ್ತಿನಿಂದ ಉತ್ತಮ ಶಿಕ್ಷಕರಾಗಿ ದೇಶದೆಲ್ಲೆಡೆ ಪ್ರಸಿದ್ಧಿಯಾದರು. ಅಂತಹ ಮಹಾನ್ ಗುರುವನ್ನು ಸ್ಮರಿಸುವ ದಿನಾಚರಣೆ ನಿಜಕ್ಕೂ ಅರ್ಥಪೂರ್ಣ ಎಂದು ನಿವೃತ್ತ ಮುಖ್ಯಶಿಕ್ಷಕ ನಿತ್ಯಾನಂದಮೂರ್ತಿ ತಿಳಿಸಿದರು.
                ನಗರದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ತಾಲ್ಲೂಕು ಶಾಖೆ ವತಿಯಿಂದ ಮಾಸಿಕ ಸಭೆಯ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಳತೆಯೊಂದಿಗೆ ವಿನಯವಂತರಾಗಿ ರಾಧಾಕೃಷ್ಣನ್‍ರವರು ಕಷ್ಟದ ಜೀವನದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸುಸಂಸ್ಕøತ ಬದುಕನ್ನು ಅಳವಡಿಸಿಕೊಂಡಿದ್ದರು. ವೇದ, ಶ್ಲೋಕ, ಸಂಸ್ಕøತವನ್ನು ಸುಲಲಿತವಾಗಿ ಹೇಳುತ್ತಿದ್ದರು. ಉಕ್ಕಿನ ಮನುಷ್ಯ ಸ್ಟಾಲಿನ್ ಜೊತೆ ಉತ್ತಮ ಸಂಪರ್ಕ ಪಡೆದುಕೊಂಡು ರಷ್ಯಾ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ಕಾರಣರಾದರು. ಪ್ರತಿಭೆ ಬಡತನದಲಿಲ್ಲ ನಮ್ಮಲ್ಲಿ ಸಾಧಿಸುವ ಛಲ ಮತ್ತು ಗುರಿ ಇರಬೇಕೆಂದು ಹೇಳುತ್ತಿದ್ದ ಇವರು, ಭಾಷಣದ ಮೂಲಕವೇ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದ್ದರು. ಭಾರತದ ಸನಾತನ ಧರ್ಮವನ್ನು ಇಡೀ ಪ್ರಪಂಚಕ್ಕೆ ಸಾರಿದ ಮಹನೀಯ. ಇಂತಹ ಮಾಹನ್ ವ್ಯಕ್ತಿಯ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಆದರ್ಶ ಶಿಕ್ಷಕರಾಗಬೇಕು. ಆಗ ಮಾತ್ರ ಪವಿತ್ರ ಶಿಕ್ಷಕ ವೃತ್ತಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
                ಕಾರ್ಯಕ್ರಮಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿಯವರಿಗೆ ಹಾಗೂ ಕೊಡಗು, ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಅತಿವೃಷ್ಟಿಗೆ ಸಿಲುಕಿ ಸಾವನ್ನಪ್ಪಿದವರಿಗೆ ಮತ್ತು ನಿವೃತ್ತ ನೌಕರರ ಸಂಘದ ಸದಸ್ಯ ಗುಂಗರುಮಳೆಯ ಮಾಧವಾಚಾರ್ಯ ವಿಧಿವಶರಾದ ಪ್ರಯುಕ್ತ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನಯ್ಯನವರನ್ನು ಸನ್ಮಾನಿಸಲಾಯಿತು. ನಂತರ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಘದ ಸದಸ್ಯರುಗಳಿಗೆ ಶುಭಕೋರಲಾಯಿತು.
                ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಬಾಲಕೃಷ್ಣ, ನಿವೃತ್ತ ನೌಕರರ ಸಹಕಾರ ಸಂಘದ ಅಧ್ಯಕ್ಷ ವಿ.ಎನ್. ಮಹಾದೇವಯ್ಯ, ಸದಸ್ಯರುಗಳಾದ ಶ್ಯಾಮ್‍ಸುಂದರ್, ಗಡಬನಹಳ್ಳಿ ಗಂಗಣ್ಣ, ಪರಶುರಾಮನಾಯಕ್, ಬಸವರಾಜು, ಶಿವಶಂಕರ್, ನರಸಿಂಹಮೂರ್ತಿ, ಡಿ.ಎಸ್. ಮರುಳಯ್ಯ, ಮಹಾಲಿಂಗಯ್ಯ, ಶಿವಗಂಗಪ್ಪ ಮತ್ತಿತರರಿದ್ದರು.

Recent Articles

spot_img

Related Stories

Share via
Copy link