ಬರಗೂರು ;
ಗರ್ಭಿಣಿಯರು ಹೆಚ್ಚಿನ ಪೌಷ್ಠಿಕವಾದ ಆಹಾರವನ್ನು ಸೇವಿಸುವ ಮೂಲಕ ಹುಟ್ಟುವ ಮಗುವಿಗೆ ಆಪೌಷ್ಠಿಕತೆ ಹೋಗಲಾಡಿಸಲು ಸಾಧ್ಯವಾಗುದು ಎಂದು ಬರಗೂರು ಸರ್ಕಾರಿ ಆಸ್ಪತ್ರೆಯ ಡಾ.ನಂದೀಶ್ ತಿಳಿಸಿದರು.
ಸಿರಾ ತಾಲ್ಲೂಕು ಬರಗೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಸಿರಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಶು ಅಭಿವೃದ್ದಿ ಯೋಜನೆ ಅಯೋಜಿಸಿದ್ದ ರಾಷ್ಟೀಯ ಪೌಷ್ಠಿಕ ಆಹಾರ ಸಪ್ತಾಹ ಹಾಗೂ ಪ್ರದಾನ ಮಂತ್ರಿ ಮಾತೃ ವಂದನಾ ಪೋಷನ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರು ವೈಧ್ಯರು ನೀಡಿದ ಔಷಧಿಯನ್ನು ಸಕಾಲದಲ್ಲಿ ತೆಗೆದು ಕೋಳ್ಳುವ ಮೂಲಕ ತಮ್ಮ ಆರೋಗ್ಯದ ಕಾಳಜಿಮಾಡುವುದು ಅಗತ್ಯವಾಗಿ ಆಗಬೇಕಿದೆ, ಸೋಪ್ಪು ತರಕಾರಿ ಹಣ್ಣು ಹೆಸರಕಾಳು ತಿನ್ನುವುದು ಪೌಷ್ಠಿಕ ಆಹಾರ ತಿನ್ನಬೇಕು ಎಂದರು.
ಸಿರಾ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಮಾತನಾಡಿ ಸರ್ಕಾರ ನೀಡುವ ಸೌಲಭ್ಯಗಳನ್ನು ಮಹಿಳೆಯರು ಪಡೆದು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಅಂಗನವಾಡಿಯಲ್ಲಿ ಓಳ್ಳೆಯ ಆಹಾರ ಪದಾರ್ಥಗಳು ಕಾಳು ನೀಡುತ್ತಿದ್ದು ತಾಯಂದಿರು ಮನೆಯಲ್ಲಿ ಕೋರದೆ ಅಂಗನವಾಡಿಗೆ ಭೇಟಿ ನೀಡಿ ಮಾಹಿತಿ ಪಡೆದು ಉತ್ತಮವಾದ ಮಗುವನ್ನು ಸಾಮಾಜಕ್ಕೆ ನೀಡಿ ಸಾರ್ಥಕತೆ ಪಡೆದುಕೊಳ್ಳೊವಂತೆ ತಿಳಿಸಿದರು.
ಈ ಸಮಾರಂಭದಲ್ಲಿ ಶಿಶು ಅಭಿವೃದ್ದಿ ಯೋಜನೆ ಅಯೋಜನಾಧಿಕಾರಿ ಎಹೆಚ್.ಬಸವರಾಜು, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀನರಸಮ್ಮ , ಸದಸ್ಯರಾದ ಮಹಾಲಕ್ಷ್ಮೀ , ಚಂದ್ರಮ್ಮ , ನರಸಮ್ಮ, ಆಸ್ಪತ್ರೆಯಕಿರಿಯ ಆರೋಗ್ಯ ಸಹಾಯಜಿ ಲತಾ,ಬರಗೂರು ವೃತ್ತ ಮೇಲ್ವಿಚಾರಕಿ ಸುರೇಖಟಾಕೆ,ಅಂಗನವಾಡಿ ಕಾರ್ಯಕರ್ತೆರು ಎನ್‍ಆರ್‍ಎಲ್ ಎಂಬಿಆರ್ ಗರ್ಭಿಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ಜರುಗಿತು, ತಾಯಾಂದಿರು ಬಾಣಂತಿಯರು ಭಾಗವಹಿಸಿ ಕಾರ್ಯಕ್ರಮ ಯಶ್ವಯಾಗಿ ಜರುಗಿತು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
