ರಾಷ್ಟ್ರಪತಿ ವಿಧವೆ ಎಂಬ ಕಾರಣಕ್ಕೆ ಸಂಸತ್ ಉದ್ಗಾಟನೆಗೆ ಕರೆದಿಲ್ಲ‌ : ಕು. ವೀರಭದ್ರಪ್ಪ

ಚಾಮರಾಜನಗರ:

      ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಧವೆ ಎಂಬ ಕಾರಣಕ್ಕೆ ನೂತನ ಸಂಸತ್ ಭವನ ಉದ್ಘಾಟನೆಗೆ ಕರೆದಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರು ಶುಕ್ರವಾರ ಹೇಳಿದ್ದಾರೆ.

     ಚಾಮರಾಜನಗರದ ಡಾ.ರಾಜ್‍ಕುಮಾರ್ ರಂಗಮಂದಿರದಲ್ಲಿ ಸಾಹಿತಿ ಕೆ.ಶ್ರೀದರ್ ಅವರ ಅವಳಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕು.ವಿ, ದೇಶದ ಶಕ್ತಿ ಕೇಂದ್ರ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕಿತ್ತು. ಆದರೆ, ರಾಷ್ಟ್ರಪತಿ ಹಿಂದುಳಿದ ಜಾತಿಯವರಾದ್ದರಿಂದ ಮತ್ತು ಅವರು ವಿಧವೆಯಾಗಿದ್ದರಿಂದ ಶುಭಕಾರ್ಯಕ್ಕೆ ಅಮಂಗಲವೆಂದು ಅವರನ್ನು ಕಾರ್ಯಕ್ರಮದಿಂದ ಪ್ರಧಾನಿ ಮೋದಿ ಹೊರಗಿಟ್ಟರು. ಆದರೆ ಇದನ್ನು ಯಾರೂ ಪ್ರಶ್ನೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

     ಸಂಸತ್ ಈ ದೇಶದ 135 ಕೋಟಿ ಜನರ ಪ್ರತಿನಿಧಿ. ಕೇವಲ ಶೇ. 2 ರಷ್ಟು ಇರುವ ಜನರದಲ್ಲ. ಅದು ದೇಶದ ಸಂಸತ್ತು. ಆದರೆ ಅದರ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಕರೆಯಲಿಲ್ಲ. ಇದನ್ನು ನಾವು ಪ್ರಶ್ನಿಸಲೂ ಇಲ್ಲ ಎಂದರು.

    ಕನ್ನಡ ಸಾಹಿತ್ಯ ಪ್ರಶ್ನಿಸುವ ಗುಣ ಹೊಂದಿದೆ. ನಮ್ಮಲ್ಲಿ ಎರಡು ರೀತಿಯ ಲೇಖಕರಿದ್ದಾರೆ. ಒಬ್ಬರು ಉಪದ್ರವಿ ಲೇಖಕರು ಮತ್ತೊಬ್ಬರು ನಿರುಪದ್ರವಿ ಲೇಖಕರು, ಸರ್ಕಾರವನ್ನು ಟೀಕಿಸುವರು, ಸರ್ಕಾರದ ತಪ್ಪನ್ನು ಪ್ರಶ್ನೆ ಮಾಡುವವರು ಉಪದ್ರವಿ ಸಾಹಿತಿಗಳು, ನಮಗೆ ಈಗ ಉಪದ್ರವಿ ಸಾಹಿತಿಗಳ ಅಗತ್ಯವಿದೆ. ಆದರೆ ಕೆಲವರು ಇರುತ್ತಾರೆ 500 ಕೊಟ್ಟರೆ ಇತ್ತ ಕಡೆ, ಜಾಸ್ತಿ ಕೊಟ್ಟರೇ ಅತ್ತಕಡೆ ಎಂಬತವರು ಎಂದರು.

    ರಾಜ್ಯದಲ್ಲಿ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾರನ್ನೂ  ಸೋಲಿಸಬೇಕೆಂದು ಕೊಂಡಿದ್ದೆವೀ ಅವರು ಸೋತಿದ್ದಾರೆ, ಯಾರುಗೆಲ್ಲಬೇಕಿತ್ತೋ ಅವರಿಗೆ 130ಕ್ಕೂ ಅಧಿಕ ಸ್ಥಾನ ಕೊಟ್ಟು ಜನ ಗೆಲ್ಲಿಸಿದ್ದಾರೆ. ದೆಹಲಿಯಿಂದ ಬಂದರು, ನಟ-ನಟಿಯರನ್ನು ಕರೆತಂದರೂ ಜನರು ಯಾವುದೇ ಮೋಡಿಗೆ ಒಳಗಾಗಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap