ತುರುವೇಕೆರೆ:
ತಾಲ್ಲೋಕಿನ ದಂಡಿನಶಿವರ ಶ್ರೀ ಹೊನ್ನಾದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉಧ್ಗಾಟಿಸಿದ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ.ಶ್ರೀನಿವಾಸ.ಟಿ ಇವರು ಮಾತನಾಡಿ ದೇಶ ಕಂಡ ಅಪ್ರತಿಮ ಶ್ರೇಷ್ಠ ಕ್ರೀಡಾ ಪಟು ಮೇಜರ್ ಧ್ಯಾನ್‍ಚಂದ್, ತನ್ನ 16ನೇ ವಯಸ್ಸಿನಲ್ಲಿ ಸೈನಿಕ ಹುದ್ದೆಗೆ ಸೇರಿದ ನಂತರ ಹಾಕಿಯನ್ನು ಕಲಿಯಲು ಪ್ರಾರಂಭಿಸಿ ಹಗಲು ರಾತ್ರಿ ಎನ್ನದೆ ಕಠಿಣ ಶ್ರಮದಿಂದ ಕೌಶಲ್ಯಗಳ ಪರಿಣತಿಯನ್ನು ಗಳಿಸಿದ್ದರು, ಧ್ಯಾನ್‍ಚಂದ್ ರಾತ್ರಿ ವೇಳೆಯಲ್ಲಿ ಚಂದ್ರನ ಬೆಳಕಿನಲ್ಲಿ ಅಭ್ಯಾಸ ಮಾಡುವುದನ್ನು ನೋಡಿ ಅವನ ಸ್ನೇಹಿತರು ಅವನಿಗೆ ಚಂದ್ (ಅಂದರೆ ಚಂದ್ರ) ಎಂದು ಕರೆಯುತ್ತಿದ್ದರು ಹಾಗಾಗಿ ಧ್ಯಾನ್ ಸಿಂಗ್ ಬದಲಾಗಿ ಧ್ಯಾನ್‍ಚಂದ್ ಎಂದು ಪ್ರಖ್ಯಾತನಾದನು. ಅವನ್ನು ಆಡಿದ ಎಲ್ಲಾ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 1000 ಗೋಲುಗಳನ್ನು ಗಳಿಸಿದ ಕೀರ್ತಿ ಮೇಜರ್ ಧ್ಯಾನ್‍ಚಂದ್‍ಗೆ ಸಲ್ಲುತ್ತದೆ. ಧ್ಯಾನ್‍ಚಂದ್ ಒಂದು ಸಾರಿ ಬಾಲ್ ಸಿಕ್ಕಿದರೆ ಸಾಕು ಯಾರು ಸಹ ಅವನಿಂದ ಕಸಿದುಕೊಳ್ಳಲು ಸಾಧ್ಯವಾಗುತ್ತಿರಲ್ಲಿಲ್ಲ ಅಂತಹ ಪ್ರಪಂಡ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದರು. ಅದಕ್ಕಾಗಿಯೇ ಅವರನ್ನು ‘ಹಾಕಿ ಮಾಂತ್ರಿಕ’ ನೆಂದು ಪ್ರಖ್ಯಾತರಾದರು.
ಅವರ ನಾಯಕತ್ವದಲ್ಲಿ, 1928, 1932 ಹಾಗೂ 1936 ರಲ್ಲಿ ನಡೆದ ಒಲೆಂಪಿಕ್ಸ್‍ನಲ್ಲಿ ಮೂರು ಚಿನ್ನದ ಪದಕವನ್ನು ಭಾರತಕ್ಕೆ ತಂದು ಕೊಟ್ಟಿದ್ದಾರೆ. 1936ರಲ್ಲಿ ನಡೆದ ಜರ್ಮನಿ ವಿರುದ್ಧ ಭಾರತ 8–01 ಗೋಲುಗಳಿಂದ ಜಯವನ್ನು ಗಳಿಸಿರುತ್ತಾರೆ. ಆಗ ಜರ್ಮನಿಯ ಅಧ್ಯಕ್ಷರಾಗಿದ್ದ ಹಿಟ್ಲರ್ ಜರ್ಮನಿಯ ಪೌರತ್ವ ಮತ್ತು ಸೈನ್ಯದಲ್ಲಿ ಉನ್ನತ ಹುದ್ದೆಯನ್ನು ಮುಂದಿಟ್ಟಾಗ ಅದನ್ನು ತಿರಸ್ಕರಿಸಿ ನನ್ನ ಆಟ ಏನಿದ್ದರು ಅದು ನನ್ನ ತಾಯಿನಾಡು ಭಾರತಕ್ಕೆ ಮಿಸಲು ಎಂದು ಹೇಳಿದರು. ಆಗ ಅವರಿಗೆ ಇದ್ದ ದೇಶ ಪ್ರೇಮ ಎಂತಹದು ಎಂದು ನಾವೆಲ್ಲರೂ ತಿಳಿದುಕೊಳ್ಳಬೇಕು. ಇಂತಹ ಶ್ರೇಷ್ಠ ಕ್ರೀಡಾ ಪಟುವಿನ ಜನ್ಮ ದಿನದಂದು ರಾಷ್ಟ್ರಪತಿ ಭವನದಲ್ಲಿ ಉತ್ತಮ ಸಾಧನೆಗೈದ ಕ್ರೀಡಾ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ಅತ್ಯುತ್ತಮ ಸಾಧನೆಯನ್ನು ಕ್ರೀಡೆಯಲ್ಲಿ ಮಾಡಿದವರಿಗೆ ಅರ್ಜುನ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ನೀಡುತ್ತಾರೆ. ಅಂತಹ ಕ್ರೀಡಪಟುಗಳ ಆದರ್ಶಗಳನ್ನು ವಿಧ್ಯಾರ್ಥಿಗಳಾದ ನೀವುಗಳು ಮೈಗೂಡಿಸಿಕೊಂಡು ಮುಂದೆ ಬನ್ನಿ ಎಂದರು.
ತುಮಕೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಕುಸ್ತಿ ಸ್ಪರ್ಧೆಯಲ್ಲಿ ಜಯಿಸಿದ ಕು. ಪ್ರತಿಭಾ, ಕು.ಮಮತ, ಕು.ಕಾವ್ಯ ಕಂಚಿನ ಪದಕ ಹಾಗೂ ಲಕ್ಷ್ಮೀದೇವಿ ಬಂಗಾರದ ಪದಕ ಗೆದ್ದ ಕ್ರೀಡಾಪಟುಗಳಿಗೆ ಇದೇ ಸಂಧರ್ಭದಲ್ಲಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು
ಅಧ್ಯಕ್ಷೀಯ ನುಡಿಗಳ್ನಾಡಿದ ಪ್ರೊ. ಶಿವಾನಂದಯ್ಯನವರು ‘ಮೇಜರ್ ಧ್ಯಾನ್‍ಚಂದ್‍ರವರ ಪರಿಶ್ರಮ, ಕಠಿಣ ಅಭ್ಯಾಸದಿಂದ ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ, ಹಾಗಾಗಿ ತಾವು ಸಹ ಕ್ರೀಡೆ & ಶಿಕ್ಷಣವನ್ನು ಜೊತೆಯಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಎಲ್ಲಾ ಬಿ.ಎ, ಬಿ.ಕಾಂ ವಿದ್ಯಾರ್ಥಿಗಳು ಪಾಳ್ಗೊಂಡಿದ್ದರು. ಪೆÇ್ರ.ಲಕ್ಷ್ಮೀರಂಗಯ್ಯನವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಕುಮಾರಿ.ಪ್ರತಿಭಾ ನಿರೂಪಿಸಿ, ಚಂದ್ರಶೇಖರ್ ಸ್ವಾಗತಿಸಿ, ಕುಮಾರಿ ಮಮತ ವಂದಿಸಿದರು, ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶ್ರೀ ರವಿಕುಮಾರ್‍ಎನ್.ಎಸ್. ಶ್ರೀ ರಾಘವೇಂದ್ರ, ಶ್ರೀ ಪ್ರಭಾಸ್ ಪಂಡಿತ್, ಶ್ರೀಮತಿ ವಸಂತಕುಮಾರಿ, ಶ್ರೀಮತಿ ರಾಜೇಶ್ವರಿ, ಮತ್ತು ಕು.ರಾಣಿ ಕು.ರಶ್ಮೀ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ