ರೆಫೆಲ್ ಯುದ್ದ ವಿಮಾನ ಖರೀದಿಯಲ್ಲಿ ಲೂಟಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಆರೋಪ

ಚಿತ್ರದುರ್ಗ:
              ರೆಫೆಲ್ ಯುದ್ದ ವಿಮಾನ ಖರೀಧಿಯಲ್ಲಿ ಬಿಜೆಪಿ. 41 ಸಾವಿರ ಕೋಟಿ ರೂ.ಲೂಟಿ ಹೊಡೆದಿರುವುದನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ರೆಫೆಲ್ ಹಗರಣದ ತನಿಖೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶಭಕ್ತಿ, ರಾಷ್ಟ್ರಭಕ್ತಿ ಎನ್ನುವವರು ದೇಶದ ರಕ್ಷಣೆ ಹೆಸರಿನಲ್ಲಿ ಯುದ್ದವಿಮಾನ ಖರೀಧಿಸುವಾಗ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದೇಶದ ಜನತೆಗೆ ವಂಚನೆ ಮಾಡಿದ್ದಾರೆ. ಯು.ಪಿ.ಎ.ಸರ್ಕಾರದ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್‍ಸಿಂಗ್ 2012 ರಲ್ಲಿ ಫ್ರಾನ್ಸ್ ಜೊತೆ ಮಾಡಿಕೊಂಡ ಒಪ್ಪಂದದಂತೆ 526 ಕೋಟಿ ರೂ.ಗೆ ಒಂದು ವಿಮಾನದಂತೆ 126 ರೆಫೆಲ್ ಯುದ್ದ ವಿಮಾನ ಖರೀಧಿಸಲು ತೀರ್ಮಾನಿಸಿತು.2014 ರಲ್ಲಿ ದೇಶದ ಪ್ರಧಾನಿಯಾದ ನರೇಂದ್ರಮೋದಿ ಒಂದು ವಿಮಾನಕ್ಕೆ 1760 ಕೋಟಿ ರೂ.ನಂತೆ 36 ವಿಮಾನ ಖರೀಧಿ ಮಾಡಿ. ಭ್ರಷ್ಟಾಚಾರ್ ನಯಿ ಕರೇಗಾ ಎಂದು ಬೊಗಳೆ ಭಾಷಣ ಮಾಡಿ ಭ್ರಷ್ಟಾಚಾರ್‍ಮೆ ಭಾಗಿದಾರ್ ಹೋಗ ಎಂದು ವ್ಯಂಗ್ಯವಾಡಿದರು.
             ಉದ್ದಿಮೆದಾರರು, ಕಾರ್ಪೊರೇಟರ್‍ಗಳ ಜೊತೆಗಿರುವ ನರೇಂದ್ರಮೋದಿ ಆಫ್‍ಸೆಟ್ ನಿರ್ವಹಣೆಯನ್ನು ಮುಖೇಶ್ ಅಂಭಾನಿ ಕಂಪನಿಗೆ ನೀಡಿ ಸ್ಥಳೀಯರಿಗೆ ವಂಚನೆ ಮಾಡಿದ್ದಾರೆ. ರೆಫೆಲ್ ಯುದ್ದ ವಿಮಾನ ಖರೀಧಿ ಹಾಗೂ ಆಫ್‍ಸೆಟ್ ನಿರ್ವಹಣೆಯಲ್ಲಿ ಏನು ಗೌಪ್ಯತೆ ಇದೆ ಎಂಬುದನ್ನು ಮೊದಲು ದೇಶದ ಜನರಿಗೆ ತಿಳಿಸಬೇಕು. ಯುದ್ದ ವಿಮಾನ ಖರೀಧಿಯಲ್ಲಿ ಯಾವುದೇ ಟೆಂಡರ್ ಕರೆದಿಲ್ಲ. ಪಾರ್ಲಿಮೆಂಟ್ ಸಮಿತಿ ಎದುರು ಚರ್ಚಿಸದೆ ಸಾವಿರಾರು ಕೋಟಿ ರೂ.ಗಳ ಹಗರಣವೆಸಗಿರುವ ಕೇಂದ್ರ ಬಿಜೆಪಿ ಸರ್ಕಾರದ ಭ್ರಷ್ಟತನವನ್ನು ಪ್ರತಿ ಮನೆ ಮನೆಗೆ ತಿಳಿಸಲು ಎ.ಐ.ಸಿ.ಸಿ.ಅಧ್ಯಕ್ಷ ರಾಹುಲ್‍ಗಾಂಧಿ ಪಾರ್ಲಿಮೆಂಟ್‍ನಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರಧಾನಿಯಿಂದ ಉತ್ತರ ನೀಡಲು ಆಗಿಲ್ಲ.ಪ್ರತಿ ಜಿಲ್ಲೆಯ ತಾಲೂಕು ಹೋಬಳಿ ಮಟ್ಟಗಳಲ್ಲಿ ರೆಫೆಲ್ ಹಗರಣದ ಕುರಿತು ಪ್ರತಿಭಟನೆಯಾಗುತ್ತಿದೆ.

             ರೆಫೆಲ್ ಜೊತೆ ಇನ್ನು ಅನೇಕ ಹಗರಣಗಳಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಚುನಾವಣೆಗೂ ಮುನ್ನ ದೇಶದ ಜನರನ್ನು ನಂಬಿಸಿ ವಂಚಿಸಿದ್ದಾರೆ. ಇಂತಹ ವಿಶ್ವಾಸಘಾತುಕ ಎನ್‍ಡಿಎ., ಬಿಜೆಪಿ.ಯನ್ನು ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬುಡಸಮೇತ ಕಿತ್ತು ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳು ಈಗಿನಿಂದಲೇ ಸಿದ್ದರಾಗಿ ಎಂದು ಕರೆ ನೀಡಿದರು.
ದೇಶದ ಇತಿಹಾಸದಲ್ಲಿಯೇ ಹಿಂದೆಂದು ಕಂಡರಿಯದ ರೀತಿಯಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಯುವಕರನ್ನು ವಂಚಿಸಿದ್ದಾರೆ. ಆರ್ಥಿಕತೆ ಕುಸಿಯುತ್ತಿದೆ.

            ಉದ್ಯಮಿಗಳ, ಬಂಡವಾಳಶಾಹಿಗಳ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕಾಗಿ ಐದುನೂರು ಹಾಗೂ ಒಂದು ಸಾವಿರ ರೂ.ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದರೆ ವಿನಃ ಇದರಿಂದ ಬಡವರಿಗೆ, ಸಣ್ಣ ಸಣ್ಣ ವ್ಯಾಪಾರಸ್ಥರಿಗೆ, ಕೃಷಿಕರಿಗೆ, ಜನಸಾಮಾನ್ಯರಿಗೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಸರ್ವಾಧಿಕಾರಿ ಹಿಟ್ಲರ್‍ನಂತೆ ವರ್ತಿಸುತ್ತಿರುವ ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಬುನಾದಿಯನ್ನು ಹಾಳು ಮಾಡುತ್ತಿದ್ದಾರೆ. ಫಸಲ್‍ಭೀಮ ಯೋಜನೆಯಡಿಯಲ್ಲಿ ರೈತರಿಗೆ ವಿಮೆ ಹಣ ಕೈಸೇರುತ್ತಿಲ್ಲ. ರೈತರ ಸಾಲ ಮನ್ನಾ ಆಗಿಲ್ಲ. ಸೇಡಿನ, ಶತ್ರುತ್ವದ ರಾಜಕಾರಣ ಮಾಡುತ್ತಿರುವ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷವನ್ನು ಸೂರ್ಯ ಚಂದ್ರ ಇರುವತನಕ ಅಳಿಸಲು ಆಗುವುದಿಲ್ಲ. ಕಾಂಗ್ರೆಸ್ ಮೇಲೆ ಕಿರುಕುಳ, ದಬ್ಬಾಳಿಕೆ ನಡೆಸಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಕಾಂಗ್ರೆಸ್ ನಿರ್ಮಿಸಿರುವ ಆಧುನಿಕ ಭಾರತದಲ್ಲಿ ಏಕತೆ, ಅಖಂಡತೆ ಇರಬೇಕು. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತ ಸಂವಿಧಾನವನ್ನು ತಿರುಚಲು ಹೊರಟಿರುವ ಬಿಜೆಪಿ.ಸರ್ಕಾರವನ್ನು ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಬೇಕಾಗಿರುವುದರಿಂದ ಕಾರ್ಯಕರ್ತರು ಸಣ್ಣಪುಟ್ಟ ವೈಮನಸ್ಸುಗಳನ್ನು ಬಿಟ್ಟು ಮತಭೇದ ಮರೆತು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಳ್ಳಿ. ವಿಧಾನಸಭೆ ಚುನಾವಣೆಯಲ್ಲಿ ಅನೇಕ ಕಾರಣ ಹಾಗೂ ಲೋಪದೋಷಗಳಿಂದ ಹಿನ್ನೆಡೆಯಾಗಿರಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನವರನ್ನು ಒಂದು ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿಕೊಳ್ಳಬೇಕು. ಕಾಂಗ್ರೆಸ್‍ನಲ್ಲಿ ಪಕ್ಷ ವಿರೋಧಿ ಚಟುವಟಿಕೆಗೆ ಮನ್ನಣೆ ಕೊಡುವುದಿಲ್ಲ. ಅಧಿಕಾರದ ಆಸೆ ಬಿಟ್ಟು ಪಕ್ಷ ಬಲವರ್ಧನೆಗೆ ಕೆಲಸ ಮಾಡಿ ಬಿಜೆಪಿ.ಯನ್ನು ಮನೆಗೆ ಕಳಿಸಿ ಎಂದು ತಿಳಿಸಿದರು.
            ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಮಾತು ಮಾತಿಗೆ ಚಾಯ್‍ವಾಲ ದೇಶದ ಪ್ರಧಾನಿಯಾಗಿದ್ದೇನೆ ಎಂದು ಹೇಳುತ್ತಿರುವ ಮೋದಿ ಎಲ್ಲಿ ಚಾ ಮಾರಿದರೂ ಎಂಬುದನ್ನು ಯಾರು ನೋಡಿಲ್ಲ. ಚಾಯ್‍ವಾಲ ಪ್ರಧಾನಿಯಾಗುವುದು ನಿಜಕ್ಕೂ ಸಾಮಾಜಿಕ ನ್ಯಾಯ ಸಿಕ್ಕಂತೆ. ಆದರೆ ಯುದ್ದ ವಿಮಾನ ಖರೀಧಿಯಲ್ಲಿ ಭಾಗಿಯಾಗಿ ಕೋಟ್ಯಾಂತರ ರೂ.ಗಳ ಹಗರಣವೆಸಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
            ವಿದೇಶಿ ವ್ಯಾಮೋಹಕ್ಕೆ ತುತ್ತಾಗಿರುವ ಪ್ರಧಾನಿ ನರೇಂದ್ರಮೋದಿ ವಿದೇಶಗಳನ್ನು ಸುತ್ತುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅವರು ಹಾಕುವ ಒಂದು ಡ್ರೆಸ್ ಬೆಲ ಹತ್ತು ಲಕ್ಷ ರೂ. ಇದು ಯಾರ ಹಣ ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುತ್ತಿರುವ ಮೋದಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಟೀಕಿಸಿದರು.
             ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಶಾಸಕರುಗಳಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಮಾಜಿ ಸಚಿವ ಕೆ.ಶಿವಮೂರ್ತಿನಾಯ್ಕ, ಮಾಜಿ ಶಾಸಕ ಎ.ವಿ.ಉಮಾಪತಿ, ಜಿ.ಪಂ.ಸದಸ್ಯ ಬಿ.ಯೋಗೇಶ್‍ಬಾಬು, ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಬಿ.ಟಿ.ಜಗದೀಶ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆ ಮೋಕ್ಷರುದ್ರಸ್ವಾಮಿ, ರುದ್ರಾಣಿ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಿ.ಕೆ.ಮೀನಾಕ್ಷಿ, ಕಾರ್ಯದರ್ಶಿ ಶೃತಿ, ಆರತಿ ಮಹಡಿ ಶಿವಮೂರ್ತಿ, ಷಣ್ಮುಖಪ್ಪ, ಭಾಗ್ಯಮ್ಮ, ಎಂ.ಡಿ.ಹಸನ್‍ತಾಹೀರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಅಜ್ಜಪ್ಪ, ಮೆಹಬೂಬ್‍ಖಾತೂನ್, ಅಶ್ರಫ್‍ಆಲಿ, ಎನ್.ಡಿ.ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Recent Articles

spot_img

Related Stories

Share via
Copy link