ಬಳ್ಳಾರಿ:
ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಹದಿನಾಲ್ಕು ವರ್ಷದ ಬಾಲಕ ಸೇರಿದಂತೆ ಮಹಿಳೆಯೊರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ನಗರದ ರೇಡಿಯೊ ಪಾರ್ಕ್ ಬಳಿ ಇಂದು ಬೆಳಗಿನಜಾವ ನಡೆದಿದೆ.
ರೇಡಿಯೊ ಪಾರ್ಕಿನ ಕೆಇಬಿ ಕಚೇರಿಯ ಎದುರು ಮನೆಯಲ್ಲಿ ವಾಸವಿದ್ದ ಹೇಮಲತಾ (42) ಹಾಗೂ ಅವರ ಸಹೋದರಿಯ ಪುತ್ರನಾದ ದರ್ಶನ್? (14) ಮೃತಪಟ್ಟವರು. ವಿನೋದ (12) ಎಂಬ ಬಾಲಕ ಗಂಭೀರ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಳೆಯದಾದ ಮನೆಯೊಂದರಲ್ಲಿ ತನ್ನ ಚಿಕ್ಕಮ್ಮನ ಜೊತೆಗೆ ಈ ಇಬ್ಬರು ಬಾಲಕರು ಮಲಗಿಕೊಂಡಿದ್ದರು. ಬೆಳಗಿನ ಜಾವ ಮನೆಯ ಮೇಲ್ಛಾವಣೆ ಕುಸಿದು ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.