ರೇವಣ್ಣಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ…!!!

ಬೆಂಗಳೂರು

      ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನನ್ನನ್ನು 420 ಎಂದು ಹೇಳುವ ಮೂಲಕ ಸ್ವಾಭಿಮಾನವನ್ನು ಕೆಣಕ್ಕಿದ್ದಾರೆ. ಹೊನ್ನಾಳಿ ಕ್ಷೇತ್ರದ ಜನರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಸಚಿವರು ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ ಸಚಿವರ ಎಲ್ಲಾ ಹಗರಣಗಳನ್ನು ಬಹಿರಂಗಗೊಳಿಸುವುದಾಗಿ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

       ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಗ್ಗೆ ಬಾಯಿಯನ್ನು ಹಗುರ ಬಿಡುವ ಮಾಜಿ ಪ್ರಧಾನಿ ದೇವೇಗೌಡರ ಸುಪುತ್ರ ರೇವಣ್ಣ ಸತ್ಯಹರಿಶ್ಚಂದ್ರ ಅಥವಾ ಆದರ್ಶವಾದಿ ಅಲ್ಲ. ಹಿರಿಯರಾಗಿರುವ ಅವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ತಾವು ಸಹ ಹಳ್ಳಿಯಿಂದ ಬಂದಿದ್ದು, ತಮಗೂ ಬಾಯಿಗೆ ಬಂದಂತೆ ನಿಂದಿಸಲು ಬರುತ್ತದೆ.

        ಆದರೆ ರೇವಣ್ಣ ಅವರಂತೆ ನಡೆದುಕೊಳ್ಳುವುದಿಲ್ಲ .ತಾವು 420 ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಪ್ರಜ್ವಲ್ ರೇವಣ್ಣ ಹೇಳಿದಂತೆ ಜೆಡಿಎಸ್ ಸೂಟ್ ಕೇಸ್ ಪಾರ್ಟಿ ಎಂಬುದನ್ನು ಒಪ್ಪಿಕೊಳ್ಳುತ್ತೀರಾ ಎಂದು ರೇವಣ್ಣ ಅವರಿಗೆ ಸವಾಲು ಹಾಕಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ