ರೈತರನ್ನು ಒಕ್ಕಲೆಬ್ಬಿಸಿದರೆ ಕಚೇರಿಗೆ ಮುತ್ತಿಗೆ : ಕೆ.ಎನ್ ರಾಜಣ್ಣ

ಮಧುಗಿರಿ

ಸಾಗುವಳಿ ಪತ್ರ ಮತ್ತು ಪಹಣಿ ರೈತರನ್ನು ನೀಡಿರುವ ಜಮೀನುಗಳ ಒಕ್ಕಲೆಬ್ಬಿಸುವ ಕೆಲಸ ಮಾಡಿರುವ ಅಧಿಕಾರಿಗಳ ಕಚೇರಿ ಮುಂದೆ 25,000 ರೈತರೊಂದಿಗೆ ಹಾಕಬೇಕಾಗುತ್ತದೆ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಸಿದ್ದಾರೆ.

ಮುತ್ತಿಗೆ ಮಾಜಿ ಎಂದು ಅವರು ತಾಲ್ಲೂಕಿನ ಬಂದ್ರೆಹಳ್ಳಿಯ ಬೆಳ್ಳೂರು ಕಟ್ಟೆ ಬಳಿ ಕಸಬಾ ಗ್ರಾಮದ 2000 ಎಕರೆ ಪ್ರದೇಶದ ರೈತರ ಬಗರ್ ಹುಕುಂ ಸಾಗುವಳಿ ಜಮೀನುಗಳನ್ನು ಅರಣ್ಯ ಇಲಾಖೆ ಬಲವಂತವಾಗಿ ಕಸಿದುಕೊಳ್ಳಲು ಮತ್ತು ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ಸರ್ಕಾರದ ಹುನ್ನಾರದ ವಿರುದ್ಧ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು . ಯಾವುದೇ ಕಾರಣಕ್ಕೂ ರೈತರು ತಮ್ಮ ಜಮೀನಿನ ಅನುಭವದ ಹಕ್ಕನ್ನು ಯಾರಿಗೂ ಬಿಟ್ಟುಕೊಡಬಾರದು ಎಂದು ಕರೆ ನೀಡಿದರು.

ಕಾನೂನಿಗಿಂತ ಮಾನವೀಯ ಮೌಲ್ಯಗಳು ಮುಖ್ಯವಾಗಿದ್ದು , ಸಂಕಷದಲ್ಲಿರುವ ರೈತರಿಗೆ ಅನುಕೂಲ ಮಾಡುವ ಒಂದಾಗಿ ಮಾನವೀಯತೆ ಸಂದರ್ಭದಲ್ಲಿ ಅಧಿಕಾರಿಗಳು ಮೆರೆಯಬೇಕು . ನಾವೂ ಸಹ ಹಿಂದೂಗಳೆ , ನಾವು ಮಹಾತ್ಮ ಗಾಂಧಿಯ ಹಿಂದುತ್ವವನ್ನು ಅನುಕರಣೆ ಮಾಡಿದರೆ , ಬಿಜೆಪಿಯವರು ಘೋಡೆ ಹಿಂದುತ್ವವನ್ನು ಅನುಕರಣೆ ಮಾಡುತ್ತಾರೆ . ಜಾತಿ – ಮತ -ಧರ್ಮಗಳ ನಡುವೆ ವಿಷಬೀಜ ಬಿತ್ತಿ , ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿದ್ದಾರೆ ಎಂದರು .

ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್ ಬಸವರಾಜುಗೆ ಮತ ಹಾಕಿದ್ದೇನೆ ಹೊರತು , ಬಿಜೆಪಿಗಲ್ಲ . ಅವರದು ಹಳೆಯ ಕಾಂಗ್ರೆಸ್ಸಿನ ಸಂಬಂಧ ಎಂದ ಅವರು , ಜಿ.ಎಸ್ . ಬಸವರಾಜು ಮತ್ತು ರಾಜೇಂದ್ರ ಅವರನ್ನು ಗೆಲ್ಲಿಸಿದ ಕೀರ್ತಿ ನಿಮ್ಮದು . ಜೆಡಿಎಸ್ ದ್ವಿಮುಖ ನೀತಿ ಅನುಸರಿಸುತ್ತಿದ್ದು , ಮಸೂದೆಗೆ ಒಂದು ಕಡೆ ಬೆಂಬಲಿಸಿ ಇನ್ನೊಂದು ಕಡೆ ವಿರೋಧಿಸುತ್ತಿದೆ . ರಾಮನಗರ – ಚನ್ನಪಟ್ಟಣಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ , ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವ ಕಡೆ ಟಿಕೆಟ್ ನೀಡಿಲ್ಲ . ಕೇವಲ ಒಂದು ಸಮು ದಾಯವನ್ನು ಚುನಾವಣೆ ಸಮಯದಲ್ಲಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದರು .

ಬಿ.ನಾಗೇಶ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ , ಅರಣ್ಯ ಇಲಾಖೆಯವರು ರೈತರ ಮೇಲೆ ಏಕಾಏಕಿ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ . ಅನೇಕ ದಶಕಗಳಿಂದ ಜಮೀನುಗಳನ್ನು ನಂಬಿ ಜೀವನ ನಡೆಸುತ್ತಿರುವ ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಎಲ್ಲರೂ ಮಾಜಿ ಶಾಸಕರಾದ ರಾಜಣ್ಣನವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು .

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಚಂದ್ರಪ್ಪ , ಜಿ.ಜೆ.ರಾಜಣ್ಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್ . ಆರ್ . ರಾಜಗೋಪಾಲ್ , ಮಲ್ಲಿಕಾರ್ಜುನಯ್ಯ , ಎನ್ ಗಂಗಣ್ಣ , ಎಂ.ಕೆ ನಂಜುಂಡಯ್ಯ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ , ಸದಸ್ಯರು ಗಳಾದ ಭವ್ಯ ಡಿ.ಎಚ್‌ ನಾಗರಾಜ್ , ಎಂ.ಬಿ.ಮರಿಯಣ್ಣ , ಜೆ.ಡಿ.ವೆಂಕಟೇಶ್ , ಸಿಂಗದಹಳ್ಳಿ ರಾಜಕುಮಾರ್ ಹಾಗೂ ರೈತರು ಇದ್ದರು .

 

 

 

 

Recent Articles

spot_img

Related Stories

Share via
Copy link