ರೈತರ ಮೊಗದಲ್ಲಿ ಸಂತಸ ಹುಟ್ಟಿಸಿದ ಮುಂಗಾರು

ಬೆಂಗಳೂರು: 

     ಬಹುನಿರೀಕ್ಷಿತ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸಿದ್ದು, ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಬೆಳಿಗ್ಗೆ ತುಂತುರು ಮಳೆ ಸುರಿಯಿತು. ಆದರೆ ನಗರದ ಕೆಲವು ಭಾಗಗಳಲ್ಲಿ ಜಲಾವೃತಗೊಂಡು ಟ್ರಾಫಿಕ್ ಜಾಮ್ ನಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.

      ಭಾರೀ ಮಳೆಯ ಸಾಧ್ಯತೆ ಇರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ, ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಒಬ್ಬರು ಸಾವನ್ನಪ್ಪಿದ್ದಾರೆ.

 

    ಮೈಸೂರು, ರಾಮನಗರ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರದಲ್ಲೂ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಬತ್ತಿ ಹೋಗಿದ್ದ ಅಣೆಕಟ್ಟುಗಳು, ಜಲಾಶಯಗಳು ಭರ್ತಿಯಾಗತೊಡಗಿವೆ.

    ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 10.17 ಟಿಎಂಸಿ ತಲುಪಿದೆ. ಕಳೆದ ವರ್ಷ ಈ ಬಾರಿ 34.06 ಟಿಎಂಸಿ ನೀರು ಇತ್ತು. 1,249 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

   ಆಲಮಟ್ಟಿ ಅಣೆಕಟ್ಟೆಯಲ್ಲಿ ಕಳೆದ ವರ್ಷ 50.04 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು , ಈ ಬಾರಿ 19.24 ಟಿಎಂಸಿ ನೀರು ದಾಖಲಾಗಿದೆ. ತುಂಗಭದ್ರಾ ಅಣೆಕಟ್ಟಿನಲ್ಲಿ 259 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ. ಆರಂಭಿಕ ಮಳೆಯ ನಂತರ 3.07 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆ ಅಣೆಕಟ್ಟೆಯಲ್ಲಿ 50.7 ಟಿಎಂಸಿ ನೀರು ಇತ್ತು.

    ನಿರಂತರ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಅಣೆಕಟ್ಟೆಗೆ 9,237 ಕ್ಯೂಸೆಕ್‌ , ಕಬಿನಿ ಜಲಾಶಯಕ್ಕೆ 3,431 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಭದ್ರಾ ಅಣೆಕಟ್ಟೆಗೆ 2,397 ಕ್ಯೂಸೆಕ್, ಹಾರಂಗಿ ಅಣೆಕಟ್ಟೆಗೆ 1,518 ಕ್ಯೂಸೆಕ್ ಮತ್ತು ಸೂಪಾ ಅಣೆಕಟ್ಟೆಗೆ 1,736 ಕ್ಯೂಸೆಕ್ ನೀರು ಒಳಹರಿವು ಇದೆ.  ವಾರಾಹಿ ಅಣೆಕಟ್ಟು, ಮಲಪ್ರಭಾ ಅಣೆಕಟ್ಟುಗಳಿಗೆ ಇನ್ನೂ ನೀರಿನ ಒಳಹರಿವು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap