ರೈತಸಂಘದಿಂದ ಪ್ರತಿಭಟನೆ

ಜಗಳೂರು :

ರೈತರಿಂದ ಬಲವಂತವಾಗಿ ಸಾಲ ವಸೂಲಿ,ಅಡವಿಟ್ಟ ಬಂಗಾರದ ಒಡವೆಗಳು ಹರಾಜ್ ಮತ್ತು ಟ್ರಾಕ್ಟರ್ ಸಿಜ್ ಮಾಡುವುದನ್ನು ನಿಲ್ಲಿಸಬೇಕೆಂದು ತಾಲೂಕು ರೈತ ಸಂಘ (ಹುಚ್ಚವ್ವನ ಹಳ್ಳಿ)ಬಣ ಮತ್ತು ಹಸಿರು ಸೇನೆಯಿಂದ ಎಸ್.ಬಿ.ಐ ಬ್ಯಾಂಕ್‍ಗೆÀ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಪಟ್ಟಣದ ಎಸ್.ಬಿ.ಐ ಬ್ಯಾಂಕ್‍ಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಬ್ಯಾಂಕ್‍ನ ವ್ಯವಸ್ಥಪಕರಿಗೆ ಮನವಿ ಸಲ್ಲಿಸಿದರು
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ ವ್ಯವಸ್ಥಾಪಕರು ಬಲವಂತ ಸಾಲ ವಸೂಲಿ ಮಾಡಲು ರೈತರಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಇದಲ್ಲದೇ ರೈತರು ಕೃಷಿ ಚಟುವಟಿಕೆಗಳಿಗೆ ಒಡವೆಗಳನ್ನು ಒತ್ತೆಹಿಟ್ಟು ಸಾಲ ತೆಗೆದುಕೊಂಡಿದ್ದು ಈ ಒಡವೆ ಗಳನ್ನು ಹರಾಜು ಹಾಕಲು ಇದೇ ಸೆ. 12 ರಂದು ದಿನಾಂಕ ನಿಗಧಿಗೊಳಿಸಿದ್ದು, ಇದು ರೈತರ ವಿರೋಧಿ ನೀತಿಯಾಗಿದೆ. ಹಲವೆಡೆ ರೈತರ ಟ್ರ್ಯಾಕ್ಟರ್‍ಗಳನ್ನು ಜಪ್ತಿ ಮಾಡಿದ್ದು, ಬಲವಂತ ಸಾಲ ವಸೂಲಿಯನ್ನು ಶೀಘ್ರವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು

ಹಸಿರು ಸೇನೆಯ ಅಧ್ಯಕ್ಷ ಗಡಿಮಾಕುಂಟೆ ಬಸವರಾಜಪ್ಪ ಮಾತನಾಡಿ ಬಿತ್ತನೆ ಸೇರಿದಂತೆ ಇತರೆ ಕೆಲಸಕ್ಕಾಗಿ ರೈತರು ತಮ್ಮ ಒಡವೆಗಳನ್ನು ಬ್ಯಾಂಕಿನಲ್ಲಿ ಆಡಮಾನಕ್ಕೆ ಹಿಡುತ್ತೆವೆ ಜಮಿನಿನಲ್ಲಿ ಬಿತ್ತಿದ ಬೆಳೆ ಕೈಗೆ ಸಿಗದೇ ಜೀವನ ನಡೆಸುವುದೆ ಕಷ್ಟವಿರುವಂತ ಪರಿಸ್ಥಿತಿಯಲ್ಲಿ ಬ್ಯಾಂಕಿನವರು ನೋಟಿಸ್ ನಿಡತ್ತಾರೆ ಇದರಿಂದ ಭಯಬಿತರಾದ ರೈತರು ವಿಧಿಇಲ್ಲದೇ ಆತ್ಮ ಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಅದ್ದರಿಂದ ಬ್ಯಾಂಕಿನವರು ರೈತರಿಂ ಬಲವಂತ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸ ಬೇಕು ಇಲ್ಲದಿದ್ದಾರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡ ಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಮುಖಂಡರಾದ ರಾಜಪ್ಪ, ಚೌಡಪ್ಪ, ದುರುಗಪ್ಪ, ಬಾಲರಾಜ್, ಗುರುಸಿದ್ದಪ್ಪ, ಹಾಲೇಶ್, ಮಹಾತ್ಮ, ಬಸಣ್ಣ, ಲೋಕೇಶ್, ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಮಂಜಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

Recent Articles

spot_img

Related Stories

Share via
Copy link