ಉಧಂಪುರ್ :
ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ರೈಲು ನಿಲ್ದಾಣಕ್ಕೆ ಹುತಾತ್ಮ ಯೋಧ ತುಷಾರ್ ಮಹಾಜನ್ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಫೆಬ್ರವರಿ 2016 ರಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಜೆಕೆಇಡಿಐ ಕಟ್ಟಡದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ತನ್ನ ಸಹ ಸೈನಿಕರನ್ನು ರಕ್ಷಿಸುವಾಗ ಭಯೋತ್ಪಾದಕನನ್ನು ಕೊಂದ ನಂತರ ಸೇನಾ ವಿಶೇಷ ಪಡೆಗಳ 9 ಪ್ಯಾರಾ ಅಧಿಕಾರಿ ಕ್ಯಾಪ್ಟನ್ ತುಷಾರ್ ಮಹಾಜನ್ ಹುತಾತ್ಮರಾಗಿದ್ದರು.
ಲೆಫ್ಟಿನೆಂಟ್ ಗವರ್ನರ್ ಕಚೇರಿಯು ಔಪಚಾರಿಕ ಅನುಮೋದನೆ ನೀಡಿದ ನಂತರ ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯ ಉಧಮ್‌ಪುರ ರೈಲು ನಿಲ್ದಾಣಕ್ಕೆ ‘ಹುತಾತ್ಮ ಕ್ಯಾಪ್ಟನ್ ತುಷಾರ್ ಮಹಾಜನ್ ರೈಲು ನಿಲ್ದಾಣ’ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಸಾಮಾನ್ಯ ಆಡಳಿತ ಇಲಾಖೆಯ ಆಯುಕ್ತ ಕಾರ್ಯದರ್ಶಿ ಸಂಜೀವ್ ವರ್ಮಾ ಗುರುವಾರ ಸಂಜೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.