ರೋಟರಿ ಸಂಸ್ಥೆ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತ ಡೆಸ್ಕ್ ವಿತರಣೆ

ಹಿರಿಯೂರು:

     ರೋಟರಿ ಸಂಸ್ಥೆ ವತಿಯಿಂದ ಹಿರಿಯೂರಿನ ಅತ್ಯಂತ ಹಳೆಯ ಶಾಲೆಯಾದ ಪ್ರಧಾನ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ಡೆಸ್ಕ್‍ಗಳನ್ನು ನೀಡಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಸಂಸ್ಥೆ ಅಧ್ಯಕ್ಷರಾದ ಶ್ರೀ ಎಂ.ಎಸ್.ರಾಘವೇಂದ್ರ ಅವರು ರೋಟರಿ ಸಂಸ್ಥೆಯು ಅನಕ್ಷರತೆಯನ್ನು ಸವಾಲಾಗಿ ಸ್ವೀಕರಿಸಿದ್ದು , ಎಲ್ಲರಿಗೂ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಶಾಲೆಗಳಿಗೆ ಮೂಲಭೂತ ಸೌಕರ್ಯಗಳಾದ ಡೆಸ್ಕ್, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಸಮಾರಂಭದಲ್ಲಿ ಹಿರಿಯ ರೋಟರಿ ಸದಸ್ಯ ಹೆಚ್.ಆರ್.ಶಂಕರ್ ಹಾಗೂ ಕಾರ್ಯದರ್ಶಿಗಳಾದ ಎಚ್.ವೆಂಕಟೇಶ್, ಎಂ.ಬಿ.ಹರ್ಷ, ರಾಘವೇಂದ್ರ, ನಾಗಭೂಷಣ್, ಕಿರಣ್‍ಕುಮಾರ್ ಹಾಗೂ ಮಹಾಬಲಶೆಟ್ಟಿ ಇತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣರೆಡ್ಡಿ ಅವರು ಎಲ್ಲರನ್ನು ಸ್ವಾಗತಿಸಿ ರೋಟರಿಯ ಕಾರ್ಯವನ್ನು ಶ್ಲಾಘಿಸಿದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap