ಹುಳಿಯಾರು:
ಹುಳಿಯಾರಿನ ತೊರೆಸೂರಗೊಂಡನಹಳ್ಳಿ ರಸ್ತೆಯಲ್ಲಿರುವ ವೆಂಕಟಾಚಲ ನಗರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದ ದ್ವಾರ ಪೂಜೆ ನೆರವೇರಿತು.
ಅರ್ಚಕರಾದ ತಿಮ್ಲಾಪುರ ಸತೀಶ್ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಮಹಾದ್ವಾರ ಹಾಗೂ ವೈಕುಂಠ ದ್ವಾರವನ್ನು ಸ್ಥಾಪಿಸಿ ಪೂಜಿಸಲಾಯಿತು. ಅಂಜನಾದ್ರಿ ಹಾಗೂ ಶೇಷಾದ್ರಿ ಭಜನಾ ಮಂಡಳಿಯವರಿಂದ ತಿರುಮಲನ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾತೃ ಜಿ.ಎಸ್.ವೆಂಕಟಾಚಲಪತಿ ಶೆಟ್ಟಿ ಮಾತನಾಡಿ ಸಾರ್ವಜನಿಕರ ಹಾಗೂ ತಿರುಪತಿ ತಿರುಮಲನ ಭಕ್ತರಿಗಾಗಿ ದೇವಸ್ಥಾನ ನಿರ್ಮಿಸಲಾಗುತ್ತಿದ್ದು, ಕಾರ್ತಿಕ ಮಾಸದಲ್ಲಿ ಪ್ರಾರಂಭೋತ್ಸವ ನೆರವೇರಿಸಲಾಗುವುದು. ವರ್ಷ ಪೂರ್ತಿ ಧಾರ್ಮಿಕ ಕಾರ್ಯಗಳು ನೆರವೇರುವಂತೆ ಸಾರ್ವಜನಿಕರ ಒಳಗೊಂಡಂತೆ ಸಮಿತಿ ಮಾಡಿ ಅವರುಗಳಿಗೆ ಜವಾಬ್ದಾರಿ ನೀಡಲಾಗುವುದು. ಇದಕ್ಕಾಗಿ ದತ್ತಿ ನಿಧಿಯನ್ನು ಸ್ಥಾಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಿಟ್ಟಪ್ಪ, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಗಾಯತ್ರಿ ಕೃಷ್ಣಮೂರ್ತಿ, ನಂದಿಹಳ್ಳಿ ಶಿವಣ್ಣ, ಬಡಗಿ ರಾಮಣ್ಣ, ತಮ್ಮಯ್ಯ, ಟಿ.ಜಿ. ಪ್ರೇಮಲೀಲಾ, ಟಿ.ಆರ್.ವಿಜಯಲಕ್ಷ್ಮಿ, ವ್ಯವಸ್ಥಾಪಕ ಶ್ರೀನಿವಾಸ ಬಾಬು, ನಾಗೇಶ್, ಬದರೀಶ್, ರಘುನಾಥ್ ಸೇರಿದಂತೆ ಭಜನಾ ಮಂಡಳಿಯ ಸದಸ್ಯರುಗಳಿದ್ದರು.