ತುಮಕೂರು:
ತುಮಕೂರು ತಾಲ್ಲೂಕು ಪೆರುಮನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಸೆ.2 ರಂದು ಮುಂಜಾನೆ 5 ಗಂಟೆಯಲ್ಲಿ ತುಮಕೂರು ಕಡೆಗೆ ತೆರಳುತ್ತಿದ್ದ ಬೈಕ್ಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಕೆ.ಎನ್.ಪರಮೇಶ್ ಎಂಬುವವರು ತೀವ್ರಗಾಯಗೊಂಡು ಸ್ಥಳದಲ್ಲೇ ಅಸುನೀಗಿದ ಘಟನೆ ನಡೆದಿದೆ.
ಮೃತರು ಬೆಳ್ಳಾವಿ ಹೋಬಳಿ ಕೊಟ್ಟನಹಳ್ಳಿಪಾಳ್ಯದ ನಿವಾಸಿಯಾಗಿದ್ದು, ಮುಂಜಾನೆ ಹೆಗ್ಗೆರೆಗೆ ಯೋಗಾಸನ ಅಭ್ಯಾಸಕ್ಕೆಂದು ತೆರಳುವಾಗ ಈ ದುರಂತ ಸಂಭವಿಸಿದೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 279, 304 (ಎ) ಪ್ರಕಾರ ಪ್ರಕರಣ ದಾಖಲುಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ