ಬೆಂಗಳೂರು:
ಲ್ಯಾಪ್ ಟಾಪ್ ಗಳು ಪರವಾನಗಿ ಇಲ್ಲದೇ ಒಳಬರುವ ಸಾಗಣೆಗಳ ಮೇಲೆ ದಿಢೀರ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ ಹಾಗೂ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಹಾಗೂ ಹೆಚ್ ಪಿ ಸಂಸ್ಥೆಗಳು ಲ್ಯಾಪ್ ಟಾಪ್ ಗಳ ಹೊಸ ಆಮದನ್ನು ಸ್ಥಗಿತಗೊಳಿಸಿವೆ.
ಲ್ಯಾಪ್ ಟಾಪ್ ನಿಯಂತ್ರಕರು ಗುರುವಾರ ಸಣ್ಣ ಟ್ಯಾಬ್ ನಿಂದ ಹಿಡಿದು ಎಲ್ಲವನ್ನೂ ಒಳಗೊಂಡಿರುವ ಪಿಸಿ ಗಳ ಆಮದು ಮಾಡಿಕೊಳ್ಳುವುದಕ್ಕೆ ಪರವಾನಗಿಯನ್ನು ಕಡ್ಡಾಯಗೊಳಿಸಿದ್ದರು. ಪರಿಣಾಮ ಲ್ಯಾಪ್ ಟಾಪ್ ತಯಾರಕರು ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದೆ.
ಆಮದು ಕಡಿಮೆ ಮಾಡಿಕೊಂಡು ಸ್ಥಳೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಮದು ಪರವಾನಗಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.