ಹುಳಿಯಾರು:
ಹುಳಿಯಾರಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಟಿ.ಆರ್.ಆನಂದ್ (30) ಎಂಬಾತ ಸೋಮವಾರ ಕೆಂಚಾಂಬ ನಗರದಲ್ಲಿನ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಸಮೀಪದ ತೊರೆಸೂರಗೊಂಡನಹಳ್ಳಿಯ ವಾಸಿಯಾಗಿದ್ದ ಈತ ಕಳೆದೊಂದು ವರ್ಷದಿಂದ ಹುಳಿಯಾರಿನ ಕೆಂಚಾಂಬ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಪಟ್ಟಣದ ಕಲ್ಪತರು ಕ್ಲಿನಿಕ್ ಎದುರು ಸ್ವಂತ ಲ್ಯಾಬ್ ಹೊಂದಿದ್ದ.
ಕಳೆದ ಆರು ತಿಂಗಳಿನಿಂದ ಹೃದಯ ಸಂಬಂಧಿ ಕಾಯಿಲೆ ಹಾಗೂ ಕಿಡ್ನಿ ಸ್ಟೋನ್ ನಿಂದ ನರಳುತ್ತಿದ್ದ. ಆಗಾಗ್ಗೆ ಬರುತ್ತಿದ್ದ ಹೊಟ್ಟೆ ನೋವು ತಾಳಲಾರದೆ ಇಂದು ಪತ್ನಿಯನ್ನು ತನ್ನ ಸ್ವಂತ ಊರಾದ ತೊರೆ ಸೂರಗೊಂಡನಹಳ್ಳಿಯಲ್ಲಿ ಬಟ್ಟೆ ಒಗೆಯಲು ಬಿಟ್ಟು ಬಂದು ಒಂದು ಗಂಟೆ ಸುಮಾರಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.ಮೃತನಿಗೆ ಪತ್ನಿ ಶಿಲ್ಪಾ ಸೇರಿದಂತೆ ಮೂರು ವರ್ಷದ ಮಗು ಹೇಮಂತ್ ಹಾಗೂ ತಂದೆ ತಾಯಿ ಇದ್ದಾರೆ. ಪ್ರಕರಣ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ