ತುಮಕೂರು :
ಕದಳಿ ಮಹಿಳಾ ವೇದಿಕೆಯಿಂದ ದಿನಾಂಕ 6-9-2018 ರ ಗುರುವಾರ ಮಧ್ಯಾನ್ಹ 2 ಗಂಟೆಗೆ ಎಂ.ಜಿ. ರಸ್ತೆಯ 3ನೇ ತಿರುವಿನ ಅಕ್ಕನ ಬಳಗದಲ್ಲಿ ಶರಣೆ ಲೋಕೇಶ್ವರಿಪ್ರಭುರವರ ಅಧ್ಯಕ್ಷತೆಯಲ್ಲಿ ವಚನ ಗಾಯನ ಸ್ಪರ್ಧೆಯನ್ನು 10 ರಿಂದ 14 ವರ್ಷ ಹಾಗೂ 16 ವರ್ಷ ಮೇಲ್ಪಟ್ಟವರಿಗೆ ಹಾಗೂ 20 ವರ್ಷ ಮೇಲ್ಪಟ್ಟವರಿಗೆ ಪ್ರಸ್ತುತ ದಿನಮಾನದಲ್ಲಿ ವಚನ ಸಾಹಿತ್ಯದ ಅನಿವಾರ್ಯತೆ” ಪ್ರಬಂಧ ಸ್ಪರ್ಧೆ ವಿಷಯದ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿಲಾಗಿದೆ.
ಸಂಜೆ 4 ಗಂಟೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಪೂಜ್ಯ ಡಾ. ಶ್ರೀ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿರುವ “ವಚನ ದಿನಾಚರಣೆ”ಯನ್ನು ಅಕ್ಕಮಹಾದೇವಿ ಸಮಾಜದ ಕಾರ್ಯದರ್ಶಿಗಳಾದ ವನಜ ಜಯಸ್ವಾಮಿ ಉದ್ಘಾಟಿಸಿಲಿದ್ದಾರೆ. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷತರಾದ ಲೋಕೇಶ್ವರಿ ಪ್ರಭುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ವಕೀಲರಾದ ರವೀಂದ್ರನಾಥ ಟ್ಯಾಗೂರ್ “ವಚನ ಧರ್ಮ ವಿಶ್ವ ಧರ್ಮ” ಈ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ರಾಗಿಣಿ ಮತ್ತು ತಂಡದಿಂದ ವಚನ ಗಾಯನ ಇರುತ್ತದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಲೋಕೇಶ್ವರಿ ಪ್ರಭುರವರು ಕೋರಿದ್ದಾರೆ.