ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮೇರು ಕೊಡುಗೆ : ಡಾ.ಶ್ರೀ ಶಾಂತವೀರ ಸ್ವಾಮೀಜಿ

ಬೆಂಗಳೂರು:

      ಕನ್ನಡ ಸಾಹಿತ್ಯಕ್ಕೆ ಮೇರು ಕೊಡುಗೆ ವಚನ ಸಾಹಿತ್ಯ ಎಂದು ಹೊಸದುರ್ಗದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಶ್ರೀ ಜಗದ್ಗುರು     ಡಾ.ಶ್ರೀ ಶಾಂತವೀರ ಸ್ವಾಮೀಜಿ ಆಶೀರ್ವಾಚನ ನೀಡಿದರು.

      ಕರುನಾಡ ಯುವಶಕ್ತಿ ಸಂಘವು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಅಂಗವಿಕಲಿಗೆ ಸಮರ್ಗಿ ವಿತರಣೆ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

     ಉದರ ಪೋಷಣೆಗಾಗಿ ಬೆಂಗಳೂರಿಗೆ ಬಂದ ಹೊರ ರಾಜ್ಯಗಳ ಜನರಿಂದ ಬೆಂಗಳೂರನ್ನು ಕನ್ನಡ ಮುಕ್ತ ಮಾಡುವ ಅಪಾಯ ಇದೆ.  ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ನಲುಗುತ್ತಿದೆ. ಕನ್ನಡ ಭಾಷೆ ಬೆಳವಣಿಗೆಗೆ ಮಠಗಳ ಪಾತ್ರ ದೊಡ್ಡದು. ಗಡಿ ಭಾಗಗಳಲ್ಲಿ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯ ತೆರೆದು ಶಿಕ್ಷಣ-ಭಾಷೆ ಬೆಳವಣಿಗೆಗೆ ಶ್ರಮವಹಿಸಿದ ಮಠಗಳ ಸೇವೆಯನ್ನು ಸರಕಾರಗಳು ಮರೆತಿವೆ. ಖಾಸಗಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಖಡಿತಗೊಳಿಸಿ ಕನ್ನಡ ಭಾಷೆಯ ಶಾಲೆಗಳ ಹಿತರಕ್ಷಣೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

      ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ಮುಚ್ಟುತ್ತಿದ್ದರೂ ಸರಕಾರ ಜಾಣ ಕುರುಡುತನ ತೋರುತ್ತಿದೆ. ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಿಂತ ಬೋಧಕರೇ ಹೆಚ್ಚಿದ್ದರೆ ಕನ್ನಡ ಉಳಿವಿಗೆ ಮಠಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವುದು ಅತ್ಯವಶ್ಯಕವಾಗಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ್ ಕುಂಚಿ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ವಕ್ತಾರರಾದ ಮುರುಳೀಧರ್ ಹಾಲಪ್ಪ ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಹಾಲಪ್ಪ, ರವಿಕೂಮರ್, ಸುಬ್ರಮಣಿ, ಕಮಾರಜ್ ಮಾಸ್ಟರ್ ಚೌಡಪ್ಪ, ಬೈರೇಶ್, ಶ್ರೀನಿವಾಸ್, ಕರುನಾಡ ಯುವ ಶಕ್ತಿ ಹಾಗೂ ಕುಂಚ ಪರಿವಾರದ ಸದಸ್ಯರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link