ಇಂದಿನ ಯಾಂತ್ರಿಕತೆಯ ದಿನಗಳಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವಿಭಕ್ತ ಕುಟುಂಬಗಳಿಂದ್ದ ಸಾಮರಸ್ಯ ಹೊಂದಾಣಿಕೆ ಹಾಗೂ ಹಿರಿಯರಿಗೆ ತೋರುತ್ತಿದ್ದ ಗೌರವಾದರಗಳು ದೂರವಾಗಿ ಜೀವನ ನೀರಸವಾಗಿದೆ. ಯುವ ಜನಾಂಗವು ಅರ್ಥಿಕ ಸ್ವಾವಲಂಬನೆಯ ನೆಪದಲ್ಲಿ ಉದ್ಯೂಗವನ್ನೇರಿಸಿ, ಸಾಕಿ ಬೆಳೆಸಿದ ಹಿರಿಯರನ್ನು ಕಡೆಗೆಣಿಸಿ ಕಿರಿಯರ ಏಳ್ಗೆಗಾಗಿ ತಮ್ಮಜೀವನವನ್ನು ಮುಡುಪಾಗಿಸಿದ ಹಿರಿಯ ಜೀವಗಳ ಜೀವನದ ಸಂಧ್ಯಾಕಾಲದಲ್ಲಿ ಒಂಟಿತನ, ಆರ್ಥಿಕ ಸಂಕಷ್ಟ, ಮಾನಸಿಕ ತುಮುಲ, ಆನಾರೋಗ್ಯ, ಜೀವನ ರಕ್ಷಣೆ, ಅನಾಧಾರ ಮುಂತಾದ ಸಮಸ್ಯೆಗಳಲ್ಲಿ ಸಿಲುಕಿ ಸಂಕಷ್ಟದಲ್ಲಿರುವುದನ್ನು ಮನಗಂಡ ಕೇಂದ್ರ ಸರ್ಕಾರವು ಪಾಲಕರ ಪೋಷನೆಯನ್ನು ಶಾಸನ ಬದ್ದಗೊಳಿಸುವ ಸಲುವಾಗಿ ಹಿರಿಯ ನಾಗರಿಕರ ರಾಷ್ಟ್ರನೀತಿಯನ್ನು ರೂಪಸಿ, ಇದರಡಿ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯಿದೆ 2017 ದಿನಾಂಕ ಸೆ.12 ರಿಂದ ಜಾರಿಗೊಳಿಸಲಾಗಿದೆ.
ಈ ಕಾಯ್ದೆಯಡಿ ಕರ್ನಾಟಕ ರಾಜ್ಯ ಸರ್ಕಾರವು ದಿ:19.11.2009 ರಂದು ನಿಯಮಗಳನ್ನು ರೂಪಿಸಿ ಜಾರಿಗೆ ತಂದಿದೆ. ಪಾಲನೆ ಎಂದರೆ ಆಹಾರ, ಬಟ್ಟೆ ವಸತಿ ಮತ್ತು ವೈದ್ಯಕೀಯ ಪೂರೈಕೆಗಳನ್ನೊಳಗೊಂಡಿದೆ. ಕೇಂದ್ರ ಸರ್ಕಾರದ ಈ ಕಾಯಿದೆ ಮತ್ತು ರಾಜ್ಯ ಸರ್ಕಾರದ ನಿಯಮಾವಳಿಗಡಿ, ಪ್ರತಿ ರೆವಿನೂ ಸಬ್‍ಡಿವಿಜûನ ಸಹಾಯಕ ಕಮೀಷನರ್ ರವರನ್ನು ರಿಬುನಲ್ ಛೇರ್‍ಮನ್ ಆಗಿ ನೇಮಕ ಮಾಡಲಾಗಿದೆ. ವಯಸ್ಕ ಮಕ್ಕಳಿಂದ ಮೊಮ್ಮಕ್ಕಲಿಂದ ಶೋಷಣೆಗೊಳಪಟ್ಟ, ತಿರಸ್ಕರಿಸಲ್ಪಟ್ಟ ಮನೆಯಿಂದ ಹೊರಹಾಕಲ್ಪಟ್ಟ ಪೋಷಕರು (ತಂದೆ ತಾಯಿಗಳು) ಟಿಬ್ರೂನಲ್‍ಗೆ 3ನೇ ನಿಯಮದಡಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಪೋಷಕರಿಗೆ ಅರ್ಜಿ ಸಲ್ಲಿಸಲು ಅವರ ವಯಸ್ಸಿನ ಮಿತಿ ಇರುವುದಿಲ್ಲ.
60ವರ್ಷ ವಯಸ್ಸಾಗಿರುವ ಮಕ್ಕಳಿಲ್ಲದ ಹಿರಿಯ ನಾಗರಿಕರಿಗೂ ಸಹ ತನ್ನ ಸಂಬಂಧಿಕರ ವಿರುದ್ಧ ಅರ್ಜಿ ಸಲ್ಲಿಸಬಹುದು. ತನ್ನ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಚರ-ಸ್ಥಿರಾಸ್ತಿಗಳು ತನ್ನ ಸಂಬಂಧಿಕರ ಸ್ವಾಧೀನದಲ್ಲಿದ್ದರೆ ಅಥವಾ ತನ್ನ ನಂತರ ಈ ಆಸ್ತಿಗಳು ಆ ಸಂಬಂಧಿಕನು ಉತ್ತರಾಧಿಕಾರಿಯಾಗಿ ಪಡೆಯಲು ಅಧಿಕಾರ ಉಳ್ಳವನಾಗಿದ್ದರೆ, ಆತನ ವಿರುದ್ಧ ಟ್ರಿಬ್ಯುನಲ್‍ಗೆ ಅಜಿ ಸಲ್ಲಿಸಬಹುದು. ಅರ್ಜಿದಾರನು ತುಮಕೂರಿನಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಸಂಪರ್ಕಿಸಿ ಅವರ ನೆರವಿನಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ 90 ದಿನಗಳ ಒಳಗಾಗಿ ಟ್ರಿಬ್ಯುನಲ್ ಈ ಅರ್ಜಿಯ ವಿಚಾರಣೆಯನ್ನು ಸಂಕ್ಷಿಪ್ತವಾಗಿ ನಡೆಸಿ ತೀರ್ಪು ನೀಡಬೇಕಾಗಿದೆ. ಪ್ರತಿವಾದಿಯ ಮಾಸಿಕ ಆದಾಯ, ಪ್ರತಿವಾದಿಯ ಕುಟುಂಬದಲ್ಲಿರುವ ಕುಟುಂಬ ಸದಸ್ಯರ ಸಂಖ್ಯೆ ಆಧಾರವನ್ನಾಗಿಟ್ಟುಕೊಂಡು ಅರ್ಜಿದಾರನಿಗೆ ಪ್ರತಿ ಮಾಹೆ 10 ಸಾವಿರ ರೂ.ವರೆಗೂ ನಿರ್ವಹಣಾ ಭತ್ಯೆ ಮಂಜೂರು ಮಾಡಬಹುದಾಗಿದೆ.
ನ್ಯಾಯಾಧೀಕರಣವು ನೀಡಿದ ಆದೇಶವನ್ನು ಪಾಲಿಸಲು ಮಕ್ಕಳು ಅಥವಾ ಸಂಬಂಧಿಕರು ಸೂಕ್ತ ಕಾರಣವಿಲ್ಲದೆ ವಿಫಲರಾದಲ್ಲಿ ನ್ಯಾಯಾಲಯವು ಸೂಕ್ತಕ್ರಮ ಕೈಗೊಳ್ಳಬಹುದು. ನ್ಯಾಯಾಲಯವು ಅಂತಹ ಪ್ರತಿಯೊಂದು ಕಾನೂನು ಉಲ್ಲಂಘನೆಯ ಕ್ರಮದ ವಿರುದ್ಧವೂ ದಂಡ ವಿಧಿಸಿ, ವಾರೆಂಟ್ ಹೊರಡಿಸಬಹುದು ಅಥವಾ ವಾರೆಂಟ್ ಕಳುಹಿಸಿದ ಬಳಿಕವೂ ನಿರ್ವಹಣಾ ಭತ್ಯೆ ಕಾನೂನು ಪ್ರಕ್ರಿಯೆ ಖರ್ಚನ್ನು ಪಾವತಿಸದಿದ್ದಲ್ಲಿ ಒಂದು ತಿಂಗಳ ಕಾಲ ಜೈಲಿಗೂ ಕಳಿಸಬಹುದು. ನ್ಯಾಯ ಮಂಡಳಿಯು ಅರ್ಜಿದಾರರ ವಿರುದ್ಧವಾಗಿ ತೀರ್ಪು ನೀಡಿದರೆ, ಇದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಪ್ರತಿವಾದಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಪ್ರತಿವಾದಿಗಳು ತಮ್ಮ ವಿರುದ್ಧ ನೀಡಿರುವ ಆದೇಶದ ಮೇಲೆ ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
ಹಿರಿಯ ನಾಗರಿಕನು ತನ್ನ ಆಸ್ತಿಯನ್ನು ಉಡುಗೊರೆ ಅಥವಾ ಇನ್ನವುದೇ ರೂಪದಲ್ಲಿ ಇತರರಿಗೆ ವರ್ಗಾಯಿಸಿದ್ದಲ್ಲಿ ಆ ರೀತಿ ಆಸ್ತಿ ಪಡೆದುಕೊಂಡವರು, ಆಸ್ತಿ ವರ್ಗಾಯಿಸಿದವರಿಗೆ ಮೂಲಭೂತ ಸೌಕರ್ಯ ಮತ್ತು ದೈಹಿಕ ಅವಶ್ಯಕತೆಗಳನ್ನು ಕೊಡಬೇಕೆಂಬ ನಿಯಮಕ್ಕೆ ಒಳಗಾಗುತ್ತಾರೆ. ಒಂದು ವೇಳೆ ಹೀಗೆ ಆಸ್ತಿ ಪಡೆದುಕೊಂಡವರು ಮೂಲಭೂತ ಸೌಕರ್ಯ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಲು ಒಪ್ಪದಿದ್ದಲ್ಲಿ ಅಥವಾ ವಿಫಲರಾದಲ್ಲಿ ಅವರು ವರ್ಗಾವಣೆಯ ಮೂಲಕ ಪಡೆದ ಆಸ್ತಿಯು, ವಂಚನೆಯ ಮೂಲಕ ಅಥವಾ ಒತ್ತಾಯ ಪೂರ್ವಕ ಅಥವಾ ಅನುಚಿತ ಪ್ರಭಾವ ಬೀರುವ ಮೂಲಕ ಗಳಿಸಿದ್ದು ಎಂದು ಪರಿಗಣಿಸಲಾಗುತ್ತದೆ. ಇಂತಹ ಆಸ್ತಿ ದಸ್ತಾವೇಜುಗಳನ್ನು ವರ್ಗಾಹಿಸಿದವರ ಆಯ್ಕೆಯ ಮೇರೆಗೆ ನ್ಯಾಯ ಮಂಡಳಿಯು ಅಸಿಂಧು ಎಂದು ಘೋಷಿಸುತ್ತದೆ. ಅಸಿಂಧು ಎಂದು ಘೋಷಿಸಿದ ಬಳಿಕ ಹಿರಿಯ ನಾಗರಿಕನಿಗೆ ಈ ಆಸ್ತಿಯನ್ನು ಪುನಃ ಆತನ ವಶಕ್ಕೆ ಕೊಡಿಸಬಹುದು. ನ್ಯಾಯಾಧೀಕರಣದಲ್ಲಿ ನ್ಯಾಯವಾದಿಗಳು ಯಾವುದೇ ಪಾರ್ಟಿಯನ್ನು ಪ್ರತಿನಿಧಿಸುವಂತಿಲ್ಲ.
ಹಿರಿಯ ನಾಗರಿಕರ ಕಾಳಜಿ ಮತ್ತು ರಕ್ಷಣೆಯ ಜವಾಬ್ದಾರಿ ಹೊತ್ತ ಯಾರೇ ಆಗಲಿ ಆ ಹಿರಿಯ ನಾಗರಿಕರನ್ನು ಸಂಪೂರ್ಣವಾಗಿ ತೊರೆಯುವ ಉದ್ದೇಶದಿಂದ ಎಲ್ಲಿಯೇ ಬಿಟ್ಟು ಬಂದಿದ್ದರೂ ಅದು ಶಿಕ್ಷಾರ್ಹ ಅಪರಾಧ ವೆನ್ನಿಸುತ್ತದೆ. ಇದಕ್ಕೆ ಮೂರು ತಿಂಗಳ ಕಾರಾಗೃಹ ವಾಸ ಅಥವಾ 5 ಸಾವಿರ ರೂ. ದಂಡ ವಿಧಿಸಬಹುದು ಅಥವಾ ಎರಡೂ ಶಿಕ್ಷೆಗಳನ್ನು ಮ್ಯಾಜಿಸ್ಟ್ರೇಟ್ ಅವರು ವಿಧಿಸಬಹುದು.
ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ತಂದೆ, ತಾಯಿಯವರ ಹಿರಿಯ ನಾಗರಿಕರ ಜೀವ ಮತ್ತು ಆಸ್ತಿ ರಕ್ಷಣೆಗಾಗಿ ತಮ್ಮ ಅಧಿಕಾರ ಕ್ಷೇತ್ರದ ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯೊಳಗೆ ವಾಸಿಸುತ್ತಿರುವ ಹಿರಿಯ ನಾಗರಿಕರ ಬಗ್ಗೆ ಅದರಲ್ಲೂ ಒಂಟಿಯಾಗಿ ವಾಸವಾಗಿರುವ ಹಿರಿಯ ನಾಗರಿಕರ ಬಗ್ಗೆ ಒಂದು ಪಟ್ಟಿಯನ್ನು ನಿರ್ವಹಿಸಲು ಠಾಣಾಧಿಕಾರಿಗಳಿಗೆ ಸೂಚಿಸಬೇಕು. ಕನಿಷ್ಠ ಪಕ್ಷ ಒಂದು ತಿಂಗಳಿಗೊಮ್ಮೆ ಠಾಣಾಧಿಕಾರಿಗಳು ಸಭೆ ಮುಖಾಂತರ ಇವರನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ನೀಗಿಸುವ ಜವಾಬ್ದಾರಿ ಹೊಂದಿರುತ್ತಾರೆ.
ಈ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಕಾಯಿದೆಯನ್ನು ಅನುಷ್ಠಾನಗೊಳಿಸಬೇಕಾಗಿರುವ ಪೋಲೀಸ್ ವರಿಷ್ಠಾಧಿಕಾರಿಗಳು, ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಸಹಾಯಕ ಕಮೀಷನರ್‍ಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಇಬ್ಬರು ಹಿರಿಯ ನಾಗರಿಕರು ಎರಡು ಹಿರಿಯ ನಾಗರಿಕರ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು 2009 ನೇ ಸಾಲಿನಲ್ಲಿ ರಚಿಸಲಾಗಿತ್ತು.
ನಾನು ಈ ಸಮಿತಿಯ ಸದಸ್ಯನಾಗಿ ಈ ಕಾಯಿದೆ ಮತ್ತು ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಾಗಾರವನ್ನು ನಡೆಸುವಂತೆಯೂ, ಇವುಗಳನ್ನು ಅನುಷ್ಠಾನಗೊಳಿಸಲು ಅನುಷ್ಠಾನಾಧಿಕಾರಿಗಳ ವೈಫಲ್ಯತೆ ಕುರಿತು, ಹಲವಾರು ಪತ್ರಗಳನ್ನು ಮತ್ತು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳಿದ್ದರೂ ಒಂದೇ ಒಂದು ಪತ್ರಕ್ಕೆ ಉತ್ತರವಾಗಲಿ ಕೇಳಿದ ಮಾಹಿತಿಯಾಗಲಿ ಒದಗಿಸದಿಲ್ಲದಿರುವುದು ಹಿರಿಯ ನಾಗರಿಕರ ಬಗ್ಗೆ ಕಾಳಜಿ ಇಲ್ಲವೆಂದು ಭಾವಿಸಲಾಗಿದೆ.
-ಎಂ.ಆರ್.ಬೋಬಡೆ, ತುಮಕೂರು. (9448024607)
