ಹಿರಿಯೂರು:
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹಿರಿಯೂರಿನ ಅನೇಕ ಮನೆಗಳಲ್ಲಿ ಶ್ರೀ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವ ಮೂಲಕ ಶ್ರೀ ವರಮಹಾಲಕ್ಷ್ಮಿ ವ್ರತ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಡಾವಣೆಯ ಮನೆ-ಮನೆಗಳನ್ನು ಮಾವಿನ ತೋರಣ ಬಣ್ಣ ಬಣ್ಣದ ರಂಗೋಲಿಗಳಿಂದ ಅಲಂಕಾರಗೊಳಿಸಿ ಶ್ರೀಮಹಾಲಕ್ಷ್ಮಿಯನ್ನು ಮನೆಯಲ್ಲಿ ಸಿಂಗರಿಸುವ ಮೂಲಕ ಮಹಿಳೆಯರು ಮಕ್ಕಳು ಹಾಗೂ ಬಂಧು ಬಾಂಧವರೊಡನೆ ಭಕ್ತಿಭಾವದಿಂದ ಮಹಾಲಕ್ಷ್ಮಿಯ ಕಥಾಶ್ರವಣ, ಶತನಾಮಾವಳಿ, ಅಷ್ಟೋತ್ತರ ಪಠಣ, ವಿಶೇಷ ಪೂಜೆ ನಡೆಸಿದರು. ಕೊನೆಯಲ್ಲಿ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು.