ವಸತಿ ಪ್ರೌಢಶಾಲೆಗೆ ಸಮಗ್ರ ಕ್ರೀಡಾ ಪ್ರಶಸ್ತಿ

ಚಿಕ್ಕನಾಯಕನಹಳ್ಳಿ

                   ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಪ್ರೌಢಶಾಲಾ ಮಕ್ಕಳು 2018-19ನೇ ಸಾಲಿನ ಶೆಟ್ಟಿಕೆರೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

                   ವಾಲಿಬಾಲ್-ಪ್ರಥಮ ಸ್ಥಾನ, ಖೋ-ಖೋ : ಪ್ರಥಮ ಸ್ಥಾನ, ಥ್ರೋಬಾಲ್-ಪ್ರಥಮ ಸ್ಥಾನ, ಷಟಲ್‍ಬ್ಯಾಡ್ಮಿಂಟನ್ : ಪ್ರಥಮ ಸ್ಥಾನ, ಕಬಡ್ಡಿ : ದ್ವಿತೀಯ ಸ್ಥಾನ ಪಡೆದಿದ್ದಾರೆ.

                   ಅಥ್ಲೆಟಿಕ್ಸ್ : 4×100 ಮೀಟರ್ ಓಟ ಪ್ರಥಮ : ಮಣಿ, ದರ್ಶಿನಿ, ಬಿಂದು, ವರ್ಷಿತ, 3000 ಮೀಟ ನಡಿಗೆ ಓಟ : ಪ್ರಥಮ ಸ್ಥಾನ-ಮೇಘನಾ.ಜಿ, 1500 ಮೀಟರ್ ಓಟ ದ್ವಿತೀಯ ಸ್ಥಾನ-ತೀರ್ಥಕುಮಾರಿ, 400ಮೀಟರ್ ಓಟ ತೃತೀಯ ಸ್ಥಾನ- ಟಿ.ಎನ್.ಹರ್ಷಿತ, 800 ಮೀಟರ್ ಓಟ ತೃತೀಯ ಸ್ಥಾನ-ಹೆಚ್.ಟಿ.ಗೌತಮಿ, 3000 ಮೀಟರ್ ನಡಿಗೆ ಓಟ : ತೃತೀಯ ಸ್ಥಾನ-ಆರ್.ಲತಾ, 200ಮೀಟರ್ ಓಟ : ತೃತೀಯ ಸ್ಥಾನ- ಹೆಚ್.ಜಿ.ವರ್ಷಿತಾ ಪಡೆದಿದ್ದಾರೆ.

                   ಉದ್ದಜಿಗಿತ ಮತ್ತು ತ್ರಿವಿಧ ಜಿಗಿತ : ಪ್ರಥಮ ಸ್ಥಾನ-ಬಿ.ಜಿ.ಪ್ರೀತಿ, ಉದ್ದ ಜಿಗಿತ : ದ್ವಿತೀಯ ಸ್ಥಾನ-ವಿ.ಡಿ.ಗಗನ, ತ್ರಿವಿಧ ಜಿಗಿತ : ದ್ವಿತೀಯ ಸ್ಥಾನ- ಇಂಪನ, ಎತ್ತರ ಜಿಗಿತ : ದ್ವಿತೀಯ ಸ್ಥಾನ-ಅನುಶ್ರೀ, ಎತ್ತರ ಜಿಗಿತ : ತೃತೀಯ ಸ್ಥಾನ-ಎಮ್.ಬಿ.ಪ್ರೀತಿ.

                  ಗುಂಡು ಎಸೆತ : ಪ್ರಥಮ-ವಿ.ಡಿ.ಗಗನ, ಗುಂಡು ಎಸೆತ : ದ್ವಿತೀಯ ಸ್ಥಾನ-ಹೆಚ್.ವಿ.ಯಶಸ್ವಿನಿ, ಜಾವಲಿನ್ ಎಸೆತ : ಪ್ರಥಮ-ಬಿ.ಜಿ.ಪ್ರೀತಿ, ಜಾವಲಿನ್ ಎಸೆತ : ದ್ವಿತೀಯ ಸ್ಥಾನ-ಜಿ.ಮೇಘನಾ, ಚಕ್ರ ಎಸೆತ : ದ್ವಿತೀಯ ಎಸೆತ-ಆರ್.ಬಿ.ಮೋನಿಕಾ, ಚಕ್ರ ಎಸೆತ : ತೃತೀಯ ಸ್ಥಾನ-ವಿ.ಡಿ.ಗಗನ ಸ್ಥಾನಗಳನ್ನು ಪಡೆದಿದ್ದು ವಿದ್ಯಾರ್ಥಿಗಳನ್ನು ಶಾಲಾ ಪ್ರಾಚಾರ್ಯರಾದ ಜಿ.ಲೋಕೇಶ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Recent Articles

spot_img

Related Stories

Share via
Copy link