ಎಂ ಎನ್ ಕೋಟೆ :
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತ ಶತ್ರು, ಮಹಾನ್ ಸಾಧಕ. ಅವರು ಪಕ್ಷಕ್ಕೆ ಮಾತ್ರ ಸೀಮಿತರಾಗಿರಲಿಲ್ಲ, ದೇಶದ ದೊಡ್ಡ ಆಸ್ತಿಯಾಗಿದ್ದರು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯ್ ಕುಮಾರ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಆಟಲ್ ಬಿಹಾರಿ ವಾಜಪೇಯಿ ಭಾsವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ವಾಜಪೇಯಿ ನಮಗೆ ದೂರವಾಗಿದ್ದರೂ ಸಹ ಅವರ ಚಿಂತನೆಗಳು ನಮ್ಮ ಜೊತೆಯಲ್ಲಿ ಇವೆ. ಯಾವುದೇ ಪಕ್ಷಗಳಲ್ಲೂ ಅವರಿಗೆ ಶತ್ರುಗಳಿಲ್ಲ. ಯಾವುದೇ ವೈಯಕ್ತಿಕ ಲಾಭ ನೀರಿಕ್ಷೆ ಮಾಡದೆ, ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಆಡÀಳಿತಾವಧಿಯಲ್ಲಿ ಕುಡಿಯುವ ನೀರು, ಗ್ರಾಮೀಣ ರಸ್ತೆಗಳು, ಉತ್ತರದಿಂದ ದಕ್ಷಿಣವರೆಗೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಸಮಾಜಕ್ಕೆ ಎಲ್ಲವನ್ನು ನೀಡಿದ್ದಾರೆ. ಇವರಂತೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಎಲ್ಲ ಕೆಲಸಗಳನ್ನು ಕೈಗೆ ಎತ್ತಿಕೊಂಡು ಅವರಂತೆ ನಡೆಯಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದಲಿಂಗಯ್ಯ, ಜಗಧೀಶ್, ಸುರೇಶ್, ಗಂಗಾಧರ್, ದರ್ಶನ್, ದೀಪು, ಯೋಗೀಶ್, ಜಗದೀಶ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.