ದೆಹಲಿ:
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರದಾನಮಂತ್ರಿ ವಾಜಪೇಯಿ ಆರೋಗ್ಯ ಸ್ಥಿತಿ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಗಣ್ಯರು ದಂಡು ಆಸ್ಪತ್ರೆಗೆ ಭೇಟಿ ನೀಡುತ್ತಿದೆ.
ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡ ಕಾರಣದಿಂದಾಗಿ ಗಣ್ಯರ ದಂಡೇ ಆಗಮಿಸುತ್ತಿದ್ದು, ಇದರಲ್ಲಿ ಗಣ್ಯರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಎಲ್.ಕೆ.ಅಡ್ವಾಣಿ, ಸುಷ್ಮಾಸ್ವರಾಜ್, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂದಿ, ಮತ್ತಿತರ ಗಣ್ಯರು ಅವರು ಆರೋಗ್ಯ ಸ್ಥಿತಿ ವಿಚಾರಿಸಲು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಯ ಹೊರರೋಗಿಗಳ ಚಿಕಿತ್ಸಾ ವಿಭಾಗವನ್ನು ಮುಚ್ಚಲಾಗಿದೆ. ಆಸ್ಪತ್ರೆಯ ಸುತ್ತ 100 ಮೀಟರ್ ಬ್ಯಾರಿಕೇಡ್ ಅನ್ನು ಹಾಕಲಾಗಿದೆ.
ಇತ್ತ ದೆಹಲಿಯ ಕೃಷ್ಣಮೆನನ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಬಿಗಿಭದ್ರತೆ ಒದಗಿಸಲಾಗಿದೆ. ಅಲ್ಲದೇ ಸಾಗರೋಪಾದಿಯಲ್ಲಿ ಜನರ ದಂಡು ಅವರ ನಿವಾಸದತ್ತ ತೆರಳುತ್ತಿದ್ದು, ಈ ಮನೆಗೆ ತಪಾಸಣಾ ಸಲಕರಣೆಗಳ ತಂಡದೊಂದಿಗೆ ಎಸ್.ಪಿ.ಜಿ.ತಂಡ ಭೇಟಿ ನೀಡಲಿದೆ.
ಏಮ್ಸ್ ಆಸ್ಪತ್ರೆಯಿಂದ ವಾಜಪೇಯಿ ಅವರ ನಿವಾಸದವರೆಗಿನ ಸಂಪರ್ಕ ರಸ್ತೆಯನ್ನು ಮುಚ್ಚಲಾಗಿದ್ದು, ಈ ಕಡೆ ಸಂಚರಿಸುವ ಸವಾರರಿಗೆ ಬೇರೆ ಮಾರ್ಗದಲ್ಲಿ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ವಾಜಪೇಯಿ ಆರೋಗ್ಯವನ್ನು ವಿಚಾರಿಸುವ ಸಲುವಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿ, ದೆಹಲಿಗೆ ತೆರಳಲಿದ್ದಾರೆ.
ಮತ್ತಷ್ಟು ಕ್ಷೀಣ:
ವಾಜಪೇಯಿ ಅವರ ಆರೋಗ್ಯವು ಮತ್ತಷ್ಟು ಕ್ಷೀಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ದೆಹಲಿಗೆ ಬರುವಂತೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಲಾಗಿದೆ.ಇದರೊಂದಿಗೆ ದೇಶಾಧ್ಯಂತ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಪಾಟ್ನಾ, ದೆಹಲಿ, ಮುಂಬೈನಲ್ಲಿರುವ ವಾಜಪೇಯಿ ಅವರ ಸಂಬಂಧಿಗಳು ಸಹ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇಡೀ ದೇಶದಾದ್ಯಂತ ವಾಜಪೇಯಿ ಅವರು ಗುಣಮುಖರಾಗಲೆಂದು ಹೋಮ,ಹವನ, ಪೂಜೆಯನ್ನು ಕೈಗೊಂಡಿದ್ದಾರೆ. 2009 ರಲ್ಲಿ ಪೆರಾಲಿಸಿಸ್ ಸ್ಟ್ರೋಕ್‍ಗೆ ತುತ್ತಾಗಿದ್ದ ವಾಜಪೇಯಿ ಅವರು, 2018 ರ ಜೂನ್ 11 ರಂದು ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೊಳಗಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ