ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿದ್ದು ಇದು ವರೆಗೂ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಎಂ ಎನ್ ಕೋಟೆ ಗ್ರಾಮಸ್ಥರು ಆರೋಪಿಸಿದ್ದಾರೆ. ಗೌರಿ ಗಣೇಶ ಹಬ್ಬದ ಹಿಂದಿನ ದಿವಸ ಕೆಟ್ಟು ಹೋಗಿದ್ದ ಶುದ್ದ ಕುಡಿಯುವ ನೀರಿನ ಘಟಕ ಇದು ವರೆಗೂ ಸರರಿಯಾಗಿಲ್ಲ ವಾರಕ್ಕೆ ಎರಡು ಮೂರು ದಿವಸ ಸ್ಥಗಿತಗೊಳುತ್ತದೆ. ಅವರ ಸಿಬ್ಬಂದಿ ಕೇಳದರೆ ಮೋಟಾರ್ ಸುಟ್ಟು ಹೋಗಿದೆ ನಮ್ಮ ಅಧಿಕಾರಿಗಳೆಗೆ ತಿಳಿಸಿದ್ದೇನೆ ಇದು ವರೆಗೂ ಕೂಡ ಅವರು ಬಂದಿಲ್ಲ ಎಂದು ಸಾಬೂಬು ಹೇಳುತ್ತಾರೆ. ಸ್ಥಳೀಯ ಗ್ರಾಮ ಪಂಚಾಯಿತಿವರು ಕೂಡ ಶುದ್ದ ನೀರಿನ ಘಟಕದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ನಿರ್ಲಕ್ಷವಹಿಸುತ್ತಿದ್ದಾರೆ. ಎಂದು ದೂರಿದ್ದಾರೆ. ಇನ್ನ ಮುಂದಾದರೂ ಶುದ್ದ ನೀರಿನ ಘಟಕವನ್ನು ಸರಿಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ತರು ಎಚ್ಚರಿಸಿದ್ದಾರೆ.
ಪಿಡಿಓ ನಾಗರಾಜು ಮಾತನಾಡಿ ನಮ್ಮ ಪಂಚಾಯಿತಿ ಗಮನಕ್ಕೆ ಬಂದಿರುವುದಿಲ್ಲ ಆಗಾಗಿ ಈಗ ನಮ್ಮ ಗಮನಕ್ಕೆ ಬಂದಿದೆ. ಕಳೆದ ಮೂರು ದಿವಸಗಳಿಂದ ಶುದ್ದ ನೀರಿನ ಘಟಕ ಸ್ಥಗಿವಾಘಿದೆ. ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳ ಜೂತೆ ಚರ್ಚಿಸಿದ್ದೇನೆ ಇನ್ನ ಎರಡು ಮೂರು ದಿವಸಗಳಲ್ಲಿ ಶುದ್ದ ನೀರಿನ ಘಟಕವನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.








