ವಾಹನ ಚಾಲಕರ ಪತ್ತಿನ ಸಹಕಾರ ಸಂಘದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ

ಚಿಕ್ಕನಾಯಕನಹಳ್ಳಿ
ಅನೇಕ ಜನರ ತ್ಯಾಗ, ಬಲಿದಾನಗಳ, ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನಾಯಕರ ಒಗ್ಗಟ್ಟು ನಮ್ಮಲ್ಲಿ ಮೂಡಬೇಕು ಎಂದು ವಾಹನ ಚಾಲಕರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕ್ಯಾಪ್ಟನ್ ಸೋಮಶೇಖರ್ ಹೇಳಿದರು.
ಪಟ್ಟಣದ ವಾಹನ ಚಾಲಕರ ಪತ್ತಿನ ಸಹಕಾರ ಸಂಘದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕ್ಯಾಪ್ಟನ್ ಸೋಮಶೇಖರ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಅಹಿಂಸಾ ತತ್ವ ಅಳವಡಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರಲ್ಲಿ ಪ್ರಮುಖರು, ಅದೇ ರೀತಿ ಅನೇಕ ಹಿರಿಯರು, ಹೋರಾಟಗಾರರು ತಮ್ಮ ಜೀವವನ್ನೇ ಸ್ವಾತಂತ್ರ್ಯಕ್ಕಾಗಿ ಬಲಿ ನೀಡಿದ್ದಾರೆ. ಅವರೆಲ್ಲರ ಸ್ಮರಣೆ ಮಾಡುವುದು ನಮ್ಮಗಳ ಕರ್ತವ್ಯ ಎಂದ ಅವರು, ವಾಹನ ಚಾಲಕರ ಪತ್ತಿನ ಸಹಕಾರ ಸಂಘ ಆರಂಭವಾದ ಈ ಪ್ರಥಮ ವರ್ಷದಲ್ಲಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಮುಂದೆಯೂ ದಿನಾಚರಣೆಯನ್ನು ನಡೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಹನ ಚಾಲಕರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ನಿರ್ವಾಣಯ್ಯ, ನಿರ್ದೇಶಕ ಕೆ.ಗಂಗಾಧರ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link