ವಿಕಲಚೇತನರಿಗೆ ಮನೋಸ್ಥೈರ್ಯ ತುಂಬಿ

ತುಮಕೂರು : 

      ವಿಕಲಚೇತನರ ಬದುಕಿಗೆ ಸಹಕಾರ ನೀಡುವ ಜತೆಗೆ ಮನೋಸ್ಥೈರ್ಯ ತುಂಬುವ ಕಾಯಕವನ್ನು ಇಡೀ ಸಮುದಾಯ ಮಾಡಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕರೆ ನೀಡಿದರು.

       ಪಟ್ಟಣ ಪಂಚಾಯಿತಿ ಆವರಣದಲ್ಲಿ ಮೀಸಲು ಅನುದಾನದ ತ್ರಿಚಕ್ರ ಮೊಪೆಡ್ ವಾಹನವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಸಮಾಜದ ಮುಖ್ಯವಾಹಿನಿಗೆ ತರಲು ವಿಕಲಚೇತನರಿಗೆ ಬೆನ್ನು ತಟ್ಟುವ ಕಾಯಕ ಮಾಡಿದರೂ ಅವರ ಸ್ವಾಭಿಮಾನ ಜೀವನಕ್ಕೆ ಆಧಾರವಾದಂತಾಗುತ್ತದೆ. ಈ ಕೆಲಸವು ಮೊದಲು ಮನೆಯಿಂದ ಆರಂಭವಾಗಬೇಕು. ದಿವ್ಯಾಂಗ ಚೇತನರಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಿ ದುಡಿಮೆಗೆ ಹುರಿದುಂಬಿಸಿ ಜೀವನ ಕಟ್ಟಿಕೊಡಲು ತಿಳಿಸಿದರು.

      ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ, ಸ್ಥಳೀಯವಾಗಿ ಪಟ್ಟಣದಲ್ಲಿ ಅರ್ಹ ವಿಕಲಚೇತನರನ್ನು ಗುರುತಿಸಿ ಅವರಿಗೆ ಬೆಂಬಲ ನೀಡಿ ಚೈತನ್ಯ ತುಂಬಲು ತ್ರಿಚಕ್ರವಾಹನವನ್ನು ನೀಡಲಾಗುತ್ತಿದೆ. ಶೇ.3 ರ ಮೀಸಲು ಅನುದಾನ ಅಂಗವಿಕಲರ ಕಲ್ಯಾಣಕ್ಕೆ ಬಳಸಲಾಗುತ್ತಿದೆ. ಮುಂದಿನ ದಿನದಲ್ಲಿ ಮತ್ತಷ್ಟು ಪರಿಕರಗಳನ್ನು ಇನ್ನಿತರ ವಿಕಲಚೇತನರಿಗೆ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಲೋಕೇಶ್‍ಬಾಬು, ಸದಸ್ಯರಾದ ಸಿ.ಮೋಹನ್, ಕುಮಾರ್, ಶೌಕತ್ ಆಲಿ, ರೇಣುಕಾಪ್ರಸಾದ್, ಜಿ.ಆರ್.ಶಿವಕುಮಾರ್, ಜಿ.ಸಿ.ಕೃಷ್ಣಮೂರ್ತಿ, ಶಶಿಕುಮಾರ್ ಮಂಗಳಮ್ಮ, ಶ್ವೇತಾ ಇತರರು ಇದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap