ವಿಕಲಚೇತನರಿಗೆ ವಿವಿಧ ಸೌಲಬ್ಯ ವಿತರಣೆ

ಚಿತ್ರದುರ್ಗ
               ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ 2017-18 ನೇ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ವಿಕಲಚೇತನ ಫಲಾನುಭವಿಗಳಿಗೆ/ವಿದ್ಯಾರ್ಥಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಆಧಾರ ಯೋಜನೆಯಡಿ ಕಬ್ಬಿಣದ ಗೂಡಂಗಡಿ ಹಾಗೂ ಟಾಕಿಂಗ್ ಲ್ಯಾಪ್‍ಟಾಪನ್ನು ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಇಂದು ಫಲಾನುಭವಿಗಳಿಗೆ ವಿತರಣೆ ಮಾಡಿದರು.
                ಜಿಲ್ಲೆಯ ಆರು ತಾಲ್ಲೂಕಿನಿಂದ ಸುಮಾರು 120 ವಿಕಲಚೇತನ ಫಲಾನುಭವಿಗಳಿಗೆ/ವಿದ್ಯಾರ್ಥಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ವಿತರಣೆ ಮಾಡಲಾಗಿದೆ ಒಂದೊಂದು ವಾಹನ 65 ಸಾವಿರೂಗಳಾಗಲಿದ್ದು ಎಲ್ಲವು ಸಹಾ ಉಚಿತವಾಗಿ ವಿತರಣೆ ಮಾಡಲಾಗಿದೆ. ಇದರಲ್ಲಿ ಚಿತ್ರದುರ್ಗ 22, ಚಳ್ಳಕೆರೆ 21,ಹಿರಿಯೂರು 19 ಹೊಳಲ್ಕೆರೆ 23 ಮೊಳಕಾಲ್ಮೂರು 21 ಹೊಸದುರ್ಗ 14 ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
                ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯನ್ನು ಓದುತ್ತಿರುವ ಜಿಲ್ಲೆಯ 18 ಅಂಧ ವಿದ್ಯಾರ್ಥಿಗಳಿಗೆ ತಲಾ 43713 ರೂಗಳಿಗೆ ಒಂದರಂತೆ ಟಾಕಿಂಗ್ ಲ್ಯಾಪ್‍ಟಾಪ ಮತ್ತು ವಿಕಲಚೇತನರು ಬೇರೆಯವರಿಗೆ ಭಾರವಾಗಬಾರದೆಂದು ಅವರು ಸ್ವಾವಲಂಭಿಗಳಾಗಬೇಕೆಂಬ ಉದ್ದೇಶದಿಂದ ಆಧಾರ ಯೋಜನೆಯಡಿ ಆಯ್ಕೆಯಾದ ಚಿತ್ರದುರ್ಗ ವಿಧಾನಸಬಾ ಕ್ಷೇತ್ರದಿಂದ 06 ಜನರಿಗೆ ಕಬ್ಬಿಣದ ಗೂಡಂಗಡಿಗಳನ್ನ ವಿತರಣೆ ಮಾಡಲಾಯಿತು,

ಈ ಸಂದರ್ಭದಲ್ಲಿ ಸಂಸದರು, ಶಾಸಕರು ವಿದಾನಪರಿಷತ್ ಸದಸ್ಯರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.