ವಿಚಾರ ತಿಳಿಸಲು ಚುನಾವಣಾ ಕಣಕ್ಕೆ

ದಾವಣಗೆರೆ :

     ನಮ್ಮ ವಿಚಾರಗಳು ಜನಸಾಮಾನ್ಯರಿಗೆ ತಿಳಿಯಬೇಕೆಂಬ ಕಾರಣಕ್ಕೆ ತಾವು ಲೋಕಸಭಾ ಕಣಕ್ಕೆ ಇಳಿದಿದ್ದು, ಮತದಾರರು ನಮ್ಮ ವಿಚಾರನ್ನು ಗಮನಿಸಿ ನನ್ನನ್ನು ಬೆಂಬಲಿಸಬೇಕೆಂದು ಅಖಿಲ ಭಾರತ ಭ್ರಷ್ಟಾಚಾರ ಮತ್ತು ಮೀಸಲಾತಿ ವಿರೋಧಿ ಜನಹಿತ ಪಕ್ಷದ ಅಭ್ಯರ್ಥಿ ಡಾ.ಶ್ರೀಧರ ಉಡುಪ ಮನವಿ ಮಾಡಿದರು.

       ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಮ್ಮ ವಿಚಾರಗಳು ಜನಸಾಮಾನ್ಯರಿಗೆ ತಲುಪುವುದು ಕಷ್ಟ. ಆದ್ದರಿಂದ ಕಳೆದ ಮೂರು ಬಾರಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದೇನೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯುವುದಕ್ಕೆ ಹಣದಿಂದ ಮಾತ್ರ ಸಾಧ್ಯ ಎನ್ನುವಂತಾಗಿದೆ. ಇದು ತೊಲಗಬೇಕು. ಜಾತಿ ರಾಜಕಾರಣ ನಿಲ್ಲಬೇಕು. ಹಣ ಹಂಚಿಕೆ ಮಾಡಿದವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಮತದಾರರಿಗೆ ಕರೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ವಿದ್ಯಾಧರ್ ಉಡುಪ, ಆದಿತ್ಯ ಉಡುಪ, ಮಾಲತಿ ಉಡುಪ, ಉದಯ್ ಉಡುಪ, ಜಯಧರ್ ಉಡುಪ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link