ವಿಜಯದಶಮಿ ಪ್ರಯುಕ್ತ ವಿಜೃಂಭಣೆಯ ಮೆರವಣಿಗೆ

ದಾವಣಗೆರೆ:

         ವಿಜಯದಶಮಿ ಆಚರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷದ್ ಸಂಯುಕ್ತಾಶ್ರಯದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.

         ಇಲ್ಲಿನ ನಿಟುವಳ್ಳಿಯ ಶ್ರೀದುರ್ಗಾಂಭಿಕಾ ದೇವಿ ದೇವಸ್ಥಾನದಿಂದ ವಿಶೇಷವಾಗಿ ಅಲಂಕೃತಗೊಂಡ ಪ್ರತಿಷ್ಠಾಪನ ಶ್ರೀ ದುರ್ಗಾದೇವಿ ಅಮ್ಮನವರ ಬೃಹತ್ ವಿಗ್ರಹದೊಂದಿಗೆ ಮಹಿಳೆಯರ ಪೂರ್ಣಕುಂಭದೊಂದಿಗೆ ನಾದಸ್ವರಗಳ ಮೆರಗಿನೊಂದಿಗೆ ಹೊರಟ ಮೆರವಣಿಗೆಯು ಹೆಚ್‍ಕೆಆರ್ ವೃತ್ತದ ಮಾರ್ಗವಾಗಿ ಕೆಟಿಜೆ ನಗರ ಪೊಲೀಸ್ ಠಾಣೆ ರಸ್ತೆ ಮುಖಾಂತರ ಪ್ರಮುಖ ರಸ್ತೆಗಳಲ್ಲಿ ಸಾಗಿ ಪಿಬಿ ರಸ್ತೆಯಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಬಂದು ತಲು ಮುಕತಾಯವಾಯಿತು.

        ಮೆರವಣಿಗೆಯಲ್ಲಿ ಸಮಿತಿ ಸಂಚಾಲಕ ಎನ್. ರಾಜಶೇಖರ್, ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ಎಸ್.ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಸತೀಶ್ ಪೂಜಾರಿ, ಕೆ.ಬಿ. ಶಂಕರನಾರಾಯಣ, ವೈ. ಮಲ್ಲೇಶ್, ಪಿ.ಎಸ್. ಜಯಣ್ಣ, ಎ.ವೈ. ಪ್ರಕಾಶ್, ದುಗ್ಗೇಶ್, ಶೇಖರಪ್ಪ, ವೀರೇಶ್ ಪೈಲ್ವಾನ್, ಸರೋಜ ದೀಕ್ಷಿತ್, ಸವಿತಾ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link