ಬೆಂಗಳೂರು:
ವಯೋವೃದ್ಧೆಯಾದ ಇಳಾ ಚಂದ್ರಶೇಖರ್ ಮನೆಗೆ ನುಗ್ಗಿ ಕಳ್ಳತನ ಎಸಗಿದ್ದ ಐವರು ಕಳರನ್ನು ವಿದ್ಯಾರಣ್ಯಪುರದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ವಿವರ:
ನಾಗರಾಜ್, ರವಿಕುಮಾರ್, ಗಂಗಾಧರ್, ಬಸವರಾಜ್, ಗಂಗರಾಜು ಬಂಧಿತ ಆರೋಪಿಗಳಾಗಿದ್ದು ಬಂದಿತರೆಲ್ಲರೂ ಚಿಕ್ಕಬಳ್ಳಾಪುರ ಮೂಲದವರು ಎಂದು ತಿಳಿದು ಬಂದಿದೆ, ಪೊಲೀಸರು ಆರೋಪಿಗಳಿಂದ 25 ಲಕ್ಷ ರೂ ಬೆಲೆಬಾಳುವ 750 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಇಳಾ ಚಂದ್ರಶೇಖರ್ ಅವರ ಪತಿ ಚಂದ್ರಶೇಖರ್ ನಿವೃತ್ತ ವಿಜ್ಞಾನಿಯಾಗಿದ್ದು, ಕೆಲ ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಚಂದ್ರಶೇಖರ್ ಅವರ ಪತ್ನಿ ಮನೆಯಲ್ಲಿ ಒಂಟಿಯಾಗಿದ್ದರು .ದೇಶದ ಮಹಾನ್ ವಿಜ್ಞಾನಿಗಳಾದ ಸರ್ ಸಿ ವಿ ರಾಮನ್ ಹಾಗೂ ಡಾ ಅಬ್ದುಲ್ ಕಲಾಂ ಜೊತೆ ಕೆಲಸ ಮಾಡಿದ್ದರಿಂದ ಚಂದ್ರಶೇಖರ್ ಮನೆಯಲ್ಲಿ ಕೋಟಿಗಟ್ಟಲೆ ಹಣ, ವಜ್ರ ವೈಡೂರ್ಯ ಇರಬಹುದು ಎಂದು ಭಾವಿಸಿದ್ದ ಐವರು ಕಳ್ಳರು ಜೂನ್ 23ರಂದು ಮನೆಗೆ ನುಗ್ಗಿದ್ದರು. ಮೊದಲು ಇಳಾ ಅವರ ಆರೋಗ್ಯ ಯೋಗಕ್ಷೇಮ ವಿಚಾರಿಸುತ್ತಲೇ ಕೈ ಕಾಲು ಕಟ್ಟಿ ಹಾಕಿದ ಅವರು ನಂತರ ಮನೆಯಲ್ಲಿದ್ದ ವಜ್ರ ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾದರು . ಘಟನೆ ಸಿಸಿಟಿವಿಯಲ್ಲಿ ರೆರ್ಕಾಡ್ ಆಗಿದ್ದರಿಂದ ಅದನ್ನು ಆಧರಿಸಿ ಕಳ್ಳರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
