ಹುಳಿಯಾರು:
ಹೊಯ್ಸಲಕಟ್ಟೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ರಂಗ ಚಟುವಟಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನಿಡಲು ಜಸ್ಟ್ ಆಸ್ಕಿಂಗ್ ಫೌಂಡೇಷನ್ ಸಂಸ್ಥೆಯಿಂದ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದು ಸಂಸ್ಥೆಯ ಪ್ರಮುಖ ಡಾ.ಶ್ರೀಪಾದ್ ಭಟ್ ಅವರು ತಿಳಿಸಿದರು.
ಶಾಲೆಗೆ ಬೇಟಿ ನೀಡಿದ ಅವರು ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಸುವರ್ಣ ವಿದ್ಯಾ ಚೇತನ ಸಂಸ್ಥೆಯ ಸದಸ್ಯರೊಂದಿಗೆ ಚರ್ಚಿಸಿ ಮಾಹಿತಿ ನೀಡಿದರು.
ಸೆಪ್ಟೆಂಬರ್ ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ, ಅಕ್ಟೋಬರ್ ನಲ್ಲಿ ಕ್ಯಾಂಪ್ ಮಾಡುವುದು, ಡಿಸೆಂಬರ್‍ನಲ್ಲಿ ನಾಟಕ ಪ್ರದರ್ಶನಕ್ಕೆ ವಿದ್ಯಾರ್ಥಿಗಳನ್ನು ಸಜ್ಜು ಮಾಡಲಾಗುವುದು. ಆಸಕ್ತ ಸ್ಥಳೀಯ ಕಲಾವಿದರು, ಶಿಕ್ಷಕರು ಬೇರೆಬೇರೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದರು.
ಪೌಂಡೇಷನ್ ನ ದೀಪು, ದಿಶಾ, ಚಂದನ್, ತುಷಾರ್, ಸುವರ್ಣ ವಿದ್ಯಾ ಚೇತನದ ರಾಮಕೃಷ್ಣಪ್ಪ, ಯುವರಾಜ್, ಶಿವಕುಮಾರ್, ಮಂಜುನಾಥ್, ಎಸ್‍ಡಿಎಂಸಿ ಅಧ್ಯಕ್ಷ ಅಜ್ಜಪ್ಪ, ಮುಖ್ಯ ಶಿಕ್ಷಕ ಪರಶಿವಮೂರ್ತಿ ಇದ್ದರು.